ADVERTISEMENT

ನಗುನಗುತಾ ಸಮಂತಾ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 19:30 IST
Last Updated 17 ನವೆಂಬರ್ 2017, 19:30 IST
ಸಮಂತಾ
ಸಮಂತಾ   

‘ಇರುಂಬು ತಿರೈ’ ತಮಿಳು ಚಲನಚಿತ್ರದ ಮೊದಲ ನೋಟ (ಫಸ್ಟ್‌ ಲುಕ್) ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಮದುವೆಯ ಖುಷಿಯಲ್ಲಿರುವ ಸಮಂತಾ ಸ್ವತಃ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಸೀರೆಯುಟ್ಟು ಆಕರ್ಷಕವಾಗಿ ನಗುತ್ತಿರುವ ಚಿತ್ರಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ವಿಜಯ್ ಅಭಿನಯದ ‘ಮರ್ಸೆಲ್’ ಚಿತ್ರದಲ್ಲಿ ಅಭಿಮಾನಿಗಳ ಮನಗೆದಿದ್ದ ಸಮಂತಾ ಅಕ್ಟೋಬರ್‌ನಲ್ಲಷ್ಟೇ ನಾಗ ಚೈತನ್ಯ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಸಮಂತಾ ಇಂದಿಗೂ ದಕ್ಷಿಣ ಭಾರತದ ಬೇಡಿಕೆಯ ನಟಿಯಾಗಿಯೇ ಉಳಿದುಕೊಂಡಿದ್ದಾರೆ.

ತೆಲುಗು ತಾರೆ ಸಾವಿತ್ರಿ ಅವರ ಜೀವನಾಧಾರಿತ ಚಿತ್ರವೊಂದರಲ್ಲಿಯೂ ಸಮಂತಾ ಬಣ್ಣಹಚ್ಚಿದ್ದಾರೆ. ಈ ಚಿತ್ರದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟರಾದ ದುಲ್ಕರ್ ಸಲ್ಮಾನ್, ಕೀರ್ತಿ ಸುರೇಶ್‌ ಮತ್ತು ವಿಜಯ್‌ ಸೇತುಪತಿ ಅಭಿನಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.