ADVERTISEMENT

ವೀರರಾಣಿ ‘ಶ್ರುತಿ’ ಫಸ್ಟ್‌ ಲುಕ್

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ವೀರರಾಣಿ ‘ಶ್ರುತಿ’ ಫಸ್ಟ್‌ ಲುಕ್
ವೀರರಾಣಿ ‘ಶ್ರುತಿ’ ಫಸ್ಟ್‌ ಲುಕ್   

ಶ್ರುತಿಹಾಸನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ‘ಸಂಗಮಿತ್ರ’ದ ಮೊದಲ ಲುಕ್‌ ಕಾನ್ ಸಿನಿಮೋತ್ಸವದಲ್ಲಿ ಬಿಡುಗಡೆಯಾಗಿದೆ.

ಹಲವು ತಿಂಗಳಿನಿಂದ ಸಂಗಮಿತ್ರ ಸಿನಿಮಾಕ್ಕೆ ತಯಾರಾಗುತ್ತಿರುವ ಶ್ರುತಿ ಈ ಸಿನಿಮಾಕ್ಕೆ ಲಂಡನ್‌ನಲ್ಲಿ ಸಮರಕಲೆಯನ್ನೂ (ಕತ್ತಿವರಸೆ)ಕಲಿತು ಬಂದಿದ್ದಾರೆ. ಸುಂದರ್ ಸಿ. ನಿರ್ದೇಶಿಸಿರುವ ಈ ಸಿನಿಮಾವನ್ನು ಶ್ರೀ ತೇನಾಂಡಳ್ ಫಿಲಂಸ್‌  ನಿರ್ಮಾಣ ಮಾಡಿದೆ. ಬಾಹುಬಲಿಯಂತೆ ಈ ಸಿನಿಮಾ ಕೂಡ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ.

ಹಿಂದಿ, ತಮಿಳು, ತೆಲುಗು ಮೂರು ಭಾಷೆಯಲ್ಲೂ ಸಿನಿಮಾ ಬಿಡುಗಡೆಗೊಳ್ಳಲಿದೆ. ಸಿನಿಮಾದಲ್ಲಿ ಆರ್ಯ ಮತ್ತು ಜಯಂ ರವಿ ಕೂಡ ಅಭಿನಯಿಸಿದ್ದಾರೆ. ಪ್ರತಿಷ್ಠಿತ ಕಾನ್ ಸಿನಿಮೋತ್ಸವದಲ್ಲಿ ಬಿಡುಗಡೆಯಾಗಿರುವ ಸಿನಿಮಾದ ಮೊದಲ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.