ADVERTISEMENT

ಆಂಧ್ರಪ್ರದೇಶದಲ್ಲಿ ‘ಇ’ ಸಂಪುಟ ಸಭೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 10:49 IST
Last Updated 15 ಸೆಪ್ಟೆಂಬರ್ 2014, 10:49 IST

ಹೈದರಾಬಾದ್‌ (ಪಿಟಿಐ): ‘ಇ’ ಸಚಿವ ಸಂಪುಟ ಸಭೆಯಲ್ಲಿದ್ದವರ ಕೈಯಲ್ಲಿ ಪೆನ್ನು ಪೇಪರ್‌ ಇರಲಿಲ್ಲ. ಬದಲಾಗಿ ಐ–ಪಾಡ್‌ಗಳಿದ್ದವು. ಸಭೆಯ ವಿವರಗಳೆಲ್ಲ ಐ–ಪಾಡ್‌ನಲ್ಲೇ ದಾಖಲಾಗುತ್ತಿದ್ದವು.

‘ಇ’ ಸಂಪುಟ ಸಭೆ ನಡೆದಿದ್ದು ಸೋಮವಾರ ಆಂಧ್ರಪ್ರದೇಶದಲ್ಲಿ. ಇ– ಆಡಳಿತದ ಮುಂದುವರಿದ ಭಾಗವಾಗಿ ಆಂಧ್ರಪ್ರದೇಶದಲ್ಲಿ ಕಾಗದ ರಹಿತ ಸಚಿವ ಸಂಪುಟ ಸಭೆ ನಡೆಯಿತು.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಇತರೆ ಸಚಿವರು ಐ–ಪಾಡ್‌ನಲ್ಲಿ ಸಭೆಯ ವಿವರಗಳನ್ನು ದಾಖಲಿಸಿಕೊಂಡು, ಕಾಗದರಹಿತ ಸಭೆ ನಡೆಸಿದರು.

ADVERTISEMENT

ಸಭೆಯು ಸಂಪೂರ್ಣ ‘ಇ’ ಮಯವಾಗಿತ್ತು. ಸಂಪುಟದ ಸಚಿವರು ತಮ್ಮ ಯೋಜನೆಗಳನ್ನು ಹೇಳಿಕೊಳ್ಳಲು ಪವರ್‌ಪಾಯಿಂಟ್‌ ಪ್ರೆಸೆಂಟೇಷನ್‌ ಬಳಸಿಕೊಂಡರು ಎಂದು ಮುಖ್ಯಮಂತ್ರಿ ಕಾರ್ಯಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.