ADVERTISEMENT

ಇನ್ನೆರಡು ದಿನಗಳಲ್ಲಿ ಜಿಂಟಾ ಹೇಳಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 19:30 IST
Last Updated 22 ಜೂನ್ 2014, 19:30 IST

ಮುಂಬೈ (ಪಿಟಿಐ): ಮಾಜಿ ಪ್ರಿಯಕರ ಹಾಗೂ ಉದ್ಯಮಿ ನೆಸ್‌ ವಾಡಿಯಾ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದ ಬಾಲಿವುಡ್‌ ನಟಿ ಹಾಗೂ ಕಿಂಗ್ಸ್‌ ಎಲೆವೆನ್‌ ಪಂಜಾಬ್‌ ಸಹ ಒಡತಿ ಪ್ರೀತಿ ಜಿಂಟಾ ಭಾನುವಾರ ಅಮೆರಿಕದಿಂದ ಹಿಂದಿರುಗಿದ್ದಾರೆ.

ಮಧ್ಯಾಹ್ನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಜಿಂಟಾ ತಮ್ಮನ್ನು ಸುತ್ತುವರಿದ  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ­ನಾಡಲು ನಿರಾ­ಕರಿಸಿ­ದರು. ಪ್ರಕರಣದ ಸಂಬಂಧ ಇನ್ನೂ ಎರಡು ದಿನಗಳಲ್ಲಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಅವರು ತಮ್ಮ ಹೇಳಿಕೆ ದಾಖಲಿಸಲಿದ್ದಾರೆ.

ಮಾಜಿ ಪ್ರಿಯಕರ ನೆಸ್‌ ವಾಡಿಯಾ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ ನಂತರ ಅವರು ಅಮೆರಿಕಕ್ಕೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.