ADVERTISEMENT

ಗೋವಾ: ಶೇ 40ರಷ್ಟು ವಿದ್ಯಾರ್ಥಿಗಳಿಂದ ಅಶ್ಲೀಲ ವಿಡಿಯೊ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 12:25 IST
Last Updated 24 ಜುಲೈ 2014, 12:25 IST

ಪಣಜಿ(ಐಎಎನ್ಎಸ್): ಗೋವಾ ರಾಜ್ಯದಲ್ಲಿನ ಕಾಲೇಜು ಮತ್ತು ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ದಿನವೊಂದಕ್ಕೆ 86 ಸಾವಿರ ಅತ್ಯಾಚಾರದ ವಿಡಿಯೊಗಳನ್ನು ವೀಕ್ಷಿಸುತ್ತಾರೆ ಎಂದು ಈ ಕುರಿತು ನಡೆದಿರುವ ಸಮೀಕ್ಷೆ ವರದಿ ಹೇಳಿದೆ.

ಈ ಕುರಿತು ಕರ್ನಾಟಕ ಮೂಲದ ರೆಸ್ಕ್ಯೂ ಸಂಸ್ಥೆ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ವರದಿ ಬಗ್ಗೆ ಗುರುವಾರ ಮಾಹಿತಿ ನೀಡಿರುವ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಷೇಕ್, ಗೋವಾ ರಾಜ್ಯದಲ್ಲಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಶೇ 47ರಷ್ಟು ವಿದ್ಯಾರ್ಥಿಗಳು ಅತ್ಯಾಚಾರಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ವೀಕ್ಷಿಸುತ್ತಾರೆ. ಅದರಲ್ಲಿ ಶೇ 80ರಷ್ಟು ಕಾಲೇಜು ವಿದ್ಯಾರ್ಥಿಗಳು, ಶೇ 40ರಷ್ಟು ಪ್ರೌಢಶಾಲಾ ಹಂತದ ಹುಡುಗರು ಅತ್ಯಾಚಾರದ ವಿಡಿಯೊಗಳನ್ನು ನಿತ್ಯ ವೀಕ್ಷಿಸುತ್ತಾರೆ. ಒಬ್ಬ ವಿದ್ಯಾರ್ಥಿ ವಾರಕ್ಕೆ ಸರಾಸರಿ 28 ಅತ್ಯಾಚಾರದ ವಿಡಿಯೊ ವೀಕ್ಷಿಸುತ್ತಾನೆ ಎಂದು ಅವರು ವಿವರಿಸಿದ್ದಾರೆ.

ಇಲ್ಲಿನ ಆಯ್ದ 10 ಕಾಲೇಜುಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದ್ದು, ಅತ್ಯಾಚಾರದ ವಿಡಿಯೊ ವೀಕ್ಷಣೆಗೂ ಮತ್ತು ನಿಜ ಜೀವನದಲ್ಲಿ ನಡೆಯುತ್ತಿರುವ ಅತ್ಯಾಚಾರ ಘಟನೆಗಳಿಗೆ ಸಂಬಂಧವಿದೆಯೇ ಎಂದು ಅಧ್ಯಯನ ನಡೆಸಲಾಗುತ್ತಿದೆ. 
  
‘ಅತ್ಯಾಚಾರದ ವಿಡಿಯೊ ನೋಡಿದ ನಂತರ ಅತ್ಯಾಚಾರ ಎಸಗಬೇಕೆಂದೆನಿಸುತ್ತದೆ’ ಎಂಬ ಅಭಿಪ್ರಾಯವನ್ನು ಸಮೀಕ್ಷೆ ವೇಳೆ ವಿದ್ಯಾರ್ಥಿಗಳು ಹೊರ ಹಾಕಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.