ADVERTISEMENT

ನೆಪೋಲಿಯನ್‌ ಬಿಜೆಪಿಗೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2014, 11:33 IST
Last Updated 21 ಡಿಸೆಂಬರ್ 2014, 11:33 IST

ಚೆನ್ನೈ (ಐಎಎನ್‌ಎಸ್‌) : ಡಿಎಂಕೆ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಡಿ.ನೆಪೋಲಿಯನ್ ಅವರು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರ ಸಮ್ಮುಖ ದಲ್ಲಿ ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಸುಮಾರು 35ವರ್ಷಗಳಿಂದ ಡಿಎಂಕೆ ಪಕ್ಷದಲ್ಲಿದ್ದ ನೆಪೋಲಿಯನ್ ಶನಿವಾರ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಯುಪಿಎ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು.

ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಪುತ್ರ ಎಂ.ಕೆ ಅಳಗಿರಿ  ಪಕ್ಷವಿರೋಧಿ ಚಟುವಟಿಕೆಯಲ್ಲಿ ಪಕ್ಷದಿಂದ ಉಚ್ಚಾಟಿತರಾದ  ನಂತರ ಅಳಗಿರಿಯ ಪ್ರಮುಖ ಬೆಂಬಲಿಗರಾಗಿದ್ದ ನಪೋಲಿಯನ್‌ ತೆರೆಮರೆಗೆ ಸರಿದರು.

ನೆಪೋಲಿಯನ್‌ 2001ರಲ್ಲಿ ತಮಿಳುನಾಡು ವಿಧಾನಸಭೆಯನ್ನು ಮೊದಲ ಬಾರಿಗೆ ಪ್ರವೇಶಿಸಿದ್ದರು. 2009ರಲ್ಲಿ ಲೋಕಸಭೆಗೆ ಪ್ರವೇಶಿಸಿದ್ದ  ನೆಪೋಲಿಯನ್‌ 2014ರ ಲೋಕಸಭೆ ಚುನಾವಣೆಯ ಕಣದಲ್ಲಿ ಸ್ಪರ್ಧಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.