ADVERTISEMENT

ಬಿಜೆಪಿ ಕಾರ್ಯಕ್ರಮದಲ್ಲಿ ಸಂಜಯ್ ದತ್

ರಾಜಕೀಯ ವಲಯದಲ್ಲಿ ಅಚ್ಚರಿ

​ಪ್ರಜಾವಾಣಿ ವಾರ್ತೆ
Published 2 ಮೇ 2016, 20:14 IST
Last Updated 2 ಮೇ 2016, 20:14 IST
ಬಿಜೆಪಿ ಕಾರ್ಯಕ್ರಮದಲ್ಲಿ ಸಂಜಯ್ ದತ್
ಬಿಜೆಪಿ ಕಾರ್ಯಕ್ರಮದಲ್ಲಿ ಸಂಜಯ್ ದತ್   

ಮುಂಬೈ (ಪಿಟಿಐ): ಜೈಲಿನಿಂದ ಬಿಡುಗಡೆ ಆದ ಮೇಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಬಾಲಿವುಡ್ ನಟ ಸಂಜಯ್ ದತ್, ಮುಂಬೈ ಹೊರವಲ ಯದಲ್ಲಿ ಬಿಜೆಪಿ ಏರ್ಪಡಿಸಿದ ಮಹಾರಾಷ್ಟ್ರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ
ಮೂಡಿಸಿದ್ದಾರೆ.

ದಿಂಡೋಶಿಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಸಂಜಯ್ ಪಾಲ್ಗೊಂಡಿದ್ದು ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಅಸಮಾಧಾನ ಉಂಟು ಮಾಡಿದೆ. ದತ್ ಕುಟುಂಬ ಮೊದಲಿನಿಂದ ಕಾಂಗ್ರೆಸ್ ಜತೆ ನಿಕಟ ಸಂಬಂಧ ಹೊಂದಿರುವುದೇ ಈ ಅತೃಪ್ತಿಗೆ ಕಾರಣ ಎನ್ನಲಾಗಿದೆ.

ದೇಶ ವಿರೋಧಿಗಳ ಜತೆ ಕೈಜೋಡಿಸುವುದು, ಅವರ ಸಹಾಯ ಪಡೆಯುವುದು ಕೇಸರಿ ಪಕ್ಷಕ್ಕೆ (ಬಿಜೆಪಿ) ಹೊಸದೇನಲ್ಲ ಎಂದು ಮುಂಬೈ ಕಾಂಗ್ರೆಸ್ ಸಮಿತಿಯ ವಕ್ತಾರ ನಿಜಾಮುದ್ದೀನ್ ರಯೀನ್ ಟೀಕಿಸಿದ್ದಾರೆ.

ADVERTISEMENT

ದೇಶ ವಿರೋಧಿಗಳ ಜತೆ ಸಖ್ಯ ಬೆಳೆಸುವುದು ಬಿಜೆಪಿ ಡಿಎನ್‌ಎ ಯಲ್ಲಿಯೇ ಇದೆ ಎಂದು ಹೇಳಿದ್ದಾರೆ.

ಮುಂದಿನ ವಿಧಾನಸಭಾ ಚುನಾ ವಣೆಯಲ್ಲಿ ಬಿಜೆಪಿಯ ಯುವ ನಾಯಕ ಮೋಹಿತ್ ಕಂಬೊಜ್ ಅವರನ್ನು ಆಯ್ಕೆ ಮಾಡಬೇಕು ಎಂದು ಕಾರ್ಯಕ್ರಮದಲ್ಲಿ ದತ್ ಮತ್ತು ಇತರ ಬಿಜೆಪಿ ಮುಖಂಡರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಂಜಯ್ ದತ್ ಯೆರವಡಾ ಜೈಲಿನಲ್ಲಿ ಶಿಕ್ಷೆ ಅನುಭವಿ ಸುತ್ತಿದ್ದಾಗ ಪದೇ ಪದೇ ಪೆರೋಲ್ ಮೇಲೆ ಹೊರಗೆ ಬರುತ್ತಿದ್ದ ಬಗ್ಗೆ ಬಿಜೆಪಿಯ ಅನೇಕ ಮುಖಂಡರು ಟೀಕೆ ಮಾಡಿದ್ದರು. ಈಗ ಅದೇ ಪಕ್ಷದ ಮುಖಂಡರು ಪಕ್ಷದ ಕಾರ್ಯಕ್ರಮಕ್ಕೆ ದತ್ ಅವರನ್ನು ಆಹ್ವಾನಿಸಿರುವುದು ಅಚ್ಚರಿಯನ್ನು ಉಂಟು ಮಾಡಿದೆ.

ಮರಾಠಿಗರು ಬಳಸುವ ಕಿತ್ತಳೆ ಬಣ್ಣದ ರುಮಾಲು ದರಿಸಿದ್ದ ಸಂಜಯ್ ದತ್, ಸಿನಿಮಾ ಶೈಲಿಯಲ್ಲಿ ಭಾಷಣ ಮಾಡಿ ಸ್ನೇಹಿತ ಕಂಬೊಜಿಗೆ ಎಲ್ಲಾ ರೀತಿಯ ಬೆಂಬಲದ ವಾಗ್ದಾನ ನೀಡಿದರು.

ಬಿಜೆಪಿ ಮುಖಂಡರಿಗೆ ಮಹಾ ರಾಷ್ಟ್ರದ ಬಗ್ಗೆ ಪ್ರೀತಿ ಇದ್ದಿದ್ದರೆ ದತ್ ಅವರನ್ನು ಖಂಡಿತವಾಗಿಯೂ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿರಲಿಲ್ಲ ಎಂದು ಕಳೆದ ಬಾರಿ ಚುನಾವಣೆಯಲ್ಲಿ ಕಂಬೊಜಿ ಅವರನ್ನು ಸೋಲಿಸಿದ್ದ ಶಿವಸೇನಾದ ಮುಖಂಡ ಸುನಿಲ್ ಪ್ರಭು ಟೀಕಿಸಿದ್ದಾರೆ.

ಸಂಜಯ್ ತಂದೆ ಸುನಿಲ್ ದತ್, ಸಹೋದರಿ ಪ್ರಿಯಾ ದತ್ ಕಾಂಗ್ರೆಸ್ ಟಿಕೆಟ್ ಮೇಲೆ ಸಂಸದರಾಗಿ ಆಯ್ಕೆಯಾದವರು. ತಾಯಿ ನರ್ಗಿಸ್ ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಹಾಗಿದ್ದರೂ ಸಂಜಯ್ ನಿಷ್ಠೆ ಬದಲಾಯಿಸಿರುವುದು ಆಶ್ಚರ್ಯಕರ ಸಂಗತಿ ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್
ಹೇಳಿದ್ದಾರೆ.

ಆರಂಭದಲ್ಲಿ ಶಿವಸೇನಾ ಜತೆ ಇದ್ದ ದತ್, ನಂತರ ಸಮಾಜವಾದಿ ಪಕ್ಷಕ್ಕೆ ಸೇರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸಿದ್ದರು. ಎರಡು ವರ್ಷಗಳ ನಂತರ ಪಕ್ಷ ಬಿಟ್ಟಿದ್ದರು.

****

ಬಿಜೆಪಿ ಮುಖಂಡರಿಗೆ ಮಹಾರಾಷ್ಟ್ರದ ಬಗ್ಗೆ ಪ್ರೀತಿ ಇದ್ದಿದ್ದರೆ ದತ್ ಅವರನ್ನು ಖಂಡಿತವಾಗಿಯೂ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿರಲಿಲ್ಲ.
-ಸುನೀಲ್ ಪ್ರಭು, ಶಿವಸೇನಾ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.