ADVERTISEMENT

ಕೈಕೊಟ್ಟ ವಿಮಾನ: ನಾಯ್ಡುಗೆ ಆರಂಭದಲ್ಲೆ ವಿಘ್ನ!

ನಾಮಪತ್ರ ಸಲ್ಲಿಕೆಗೆ ತೆರಳುತ್ತಿದ್ದ ವೇಳೆ ತಾಂತ್ರಿಕ ದೋಷ

​ಪ್ರಜಾವಾಣಿ ವಾರ್ತೆ
Published 30 ಮೇ 2016, 11:12 IST
Last Updated 30 ಮೇ 2016, 11:12 IST
ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಮತ್ತು ರಾಜೀವ್‌ ಪ್ರತಾಪ್‌ ರೂಡಿ ಅವರು ದೆಹಲಿ ವಿಮಾನ ನಿಲ್ದಾಣದಿಂದ ಜೈಪುರಕ್ಕೆ ಪ್ರಯಾಣಿಸಬೇಕಿದ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಸಬೇಕಾದ ಸಮಯದಲ್ಲಿ ವ್ಯತ್ಯಯ ಉಂಟಾಯಿತ್ತು.
ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಮತ್ತು ರಾಜೀವ್‌ ಪ್ರತಾಪ್‌ ರೂಡಿ ಅವರು ದೆಹಲಿ ವಿಮಾನ ನಿಲ್ದಾಣದಿಂದ ಜೈಪುರಕ್ಕೆ ಪ್ರಯಾಣಿಸಬೇಕಿದ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಸಬೇಕಾದ ಸಮಯದಲ್ಲಿ ವ್ಯತ್ಯಯ ಉಂಟಾಯಿತ್ತು.   

ನವದೆಹಲಿ(ಪಿಟಿಐ): ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಮತ್ತು ರಾಜೀವ್‌ ಪ್ರತಾಪ್‌ ರೂಡಿ ಅವರು ದೆಹಲಿ ವಿಮಾನನಿಲ್ದಾಣದಿಂದ ಜೈಪುರಕ್ಕೆ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಸಬೇಕಾದ ಸಮಯದಲ್ಲಿ ವ್ಯತ್ಯಯ ಉಂಟಾಯಿತು.

ರಾಜಸ್ಥಾನದಿಂದ ರಾಜ್ಯಸಭೆಗೆ ಬಿಜೆಪಿ ಅರ್ಭಥಿಯಾಗಿ ನಾಮಪತ್ರ ಸಲ್ಲಿಸಲು ವೆಂಕಯ್ಯ ನಾಯ್ಡು ಸೋಮವಾರ ದೆಹಲಿಯಿಂದ ಜೈಪುರಕ್ಕೆ ತೆರಳಬೇಕಿತ್ತು. ಆದರೆ, ದೆಹಲಿ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ಇಂಧನ ಎಚ್ಚರಿಕೆ ಸಂಕೇತ ಬಂದ ಕಾರಣ ಪೈಲಟ್ ವಿಮಾನ ಸ್ಥಗಿತಗೊಳ್ಳಿಸಿದ್ದರು. ಇದು ನಾಯ್ಡು ಅವರಿಗೆ ಆರಂಭದಲ್ಲೇ ವಿಘ್ನ ಎನ್ನುವಂತಾಗಿದೆ.

ಘಟನೆ ಹಿನ್ನೆಲೆ ನಾಯ್ಡು ಮತ್ತು ರೂಡಿ ಅವರು ಖಾಸಗಿ ವಿಮಾನದಲ್ಲಿ ಜೈಪುರಕ್ಕೆ ತಲುಪಿದರು‌‌‌. ನಂತರ ವಿಮಾನನಿಲ್ದಾಣದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಬರಮಾಡಿಕೊಂಡು ನಾಮಪತ್ರ ಸಲ್ಲಿಸಲು ಹೊರಟರು.

ತಾಂತ್ರಿಕ ದೋಷದಿಂದ ಯಾವುದೇ ಅಹಿತಕಾರ ಘಟನೆ ಸಂಭವಿಸಿಲ್ಲ. ಹಾಗೂ ವೆಂಕಯ್ಯ ನಾಯ್ಡು ಮತ್ತು ರೂಡಿ ಇಬ್ಬರು ಸುರಕ್ಷಿತರಾಗಿದ್ದಾರೆ. ಜೈಪುರಕ್ಕೆ ತಲುಪಲು ವಿಮಾನ ಎರಡು ಗಂಟೆ ಕಾಲ ತಡವಾಯಿತ್ತು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 31 ಕೊನೆ ದಿನ. ಜೂನ್‌ 11ರಂದು ಚುನಾವಣೆ ನಡೆಯಲಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.