ADVERTISEMENT

ಶ್ರೀನಗರ: 6ನೇ ಶತಮಾನದ ಶಿವನ ಮೂರ್ತಿ ಪತ್ತೆ

ಪಿಟಿಐ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಶ್ರೀನಗರ: 6ನೇ ಶತಮಾನದ ಶಿವನ ಮೂರ್ತಿ ಪತ್ತೆ
ಶ್ರೀನಗರ: 6ನೇ ಶತಮಾನದ ಶಿವನ ಮೂರ್ತಿ ಪತ್ತೆ   

ಶ್ರೀನಗರ: ನಗರದ ಹೊರವಲಯದಲ್ಲಿರುವ ಹರ್ವಾನ್ ಪ್ರದೇಶದಲ್ಲಿ 6 ನೇ ಶತಮಾನದ  ಭಗವಾನ್ ಶಿವನ ಅಪರೂಪದ ಒಂದು ಶಿಲೆ ದೊರೆತಿದೆ. ಜಲಾಶಯ ನಿರ್ಮಾಣಕ್ಕಾಗಿ ನೆಲವನ್ನು ಅಗೆಯುವ ವೇಳೆ ಈ ಮೂರ್ತಿ ಸಿಕ್ಕಿದೆ.

ಶಿಲ್ಪವು ಸುಮಾರು 2.5 ಅಡಿ ಉದ್ದ ಇದ್ದು, ಮೊಟ್ಟೆಯಾಕಾರದ್ದಿದೆ. ಇದನ್ನು ಪೊಲೀಸರು ಪುರಾತತ್ವ ಇಲಾಖೆಗೆ ನೀಡಿದ್ದಾರೆ. ಇದೇ ಮೊದಲ ಬಾರಿ ಇಂಥದ್ದೊಂದು ಮೂರ್ತಿ ಸಿಕ್ಕಿದೆ ಎಂದು ಇಲಾಖೆಯ ನಿರ್ದೇಶಕ ಶಫಿ ಜಾಹಿದ್‌ ಹೇಳಿದ್ದಾರೆ. ಹರ್ವಾನ್‌ ಪ್ರದೇಶವು ಪಾರಂಪರಿಕ ತಾಣವೆಂದು ಪ್ರಸಿದ್ಧಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.