ADVERTISEMENT

ಸಿಬಿಎಸ್‌ಇ: ಡಿಜಿಟಲ್‌ ರೂಪದಲ್ಲಿ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ನವದೆಹಲಿ(ಪಿಟಿಐ):  ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ವಿದ್ಯಾರ್ಥಿಗಳಿಗೆ ಡಿಜಿಟಲ್‌ ರೂಪದಲ್ಲಿ ಪ್ರಮಾಣಪತ್ರಗಳನ್ನು ನೀಡಲು ಮುಂದಾಗಿದೆ.  ಅಂಕಪಟ್ಟಿ ಮತ್ತು ಇತರ ಪ್ರಮಾಣಪತ್ರಗಳನ್ನು ಕಾಗದರೂಪದಲ್ಲಿ ನೀಡುವುದರೊಂದಿಗೆ ಡಿಜಿಟಲ್‌ ರೂಪ ದಲ್ಲೂ ನೀಡಲಿದೆ. ಇವುಗಳನ್ನು ವಿದ್ಯಾರ್ಥಿ ಗಳು ಡಿಜಿಟಲ್ ಲಾಕರ್‌ನಲ್ಲಿ ಇಟ್ಟುಕೊಳ್ಳ ಬಹುದಾಗಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಡಿಜಿಟಲ್‌ ರೂಪದ ಪ್ರಮಾಣ ಪತ್ರ ಗಳನ್ನು ನೀಡುವ ಕಾರ್ಯದಲ್ಲಿ ತೊಡ ಗಿದ್ದೇವೆ.  ಮಂಡಳಿ ಇನ್ನೆರಡು ತಿಂಗಳಲ್ಲಿ ಇದನ್ನು ಜಾರಿಗೊಳಿಸಲಿದೆ’ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯ ದರ್ಶಿ ಆರ್‌.ಎಸ್‌.ಶರ್ಮಾ ಹೇಳಿದ್ದಾರೆ.

ಡಿಜಿಟಲ್‌ ಲಾಕರ್‌ ಸೌಲಭ್ಯವನ್ನು ಫೆ.10 ರಂದು ಸರ್ಕಾರ ಆರಂಭಿಸಿತ್ತು. ಮೂರು ವಾರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಇದನ್ನು ಬಳಸಲು ಆರಂ ಭಿಸಿದರು. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 24 ಸಾವಿರ, ಉತ್ತರ ಪ್ರದೇಶದಲ್ಲಿ 17 ಸಾವಿರಕ್ಕೂ ಹೆಚ್ಚು ಮತ್ತು ಗುಜರಾತ್‌ನಲ್ಲಿ 13 ಸಾವಿರ ಜನ ಈ ಸೌಲಭ್ಯ ಪಡೆಯಲು ನೋಂದಾಯಿಸಿದ್ದಾರೆ.

‘ಸರ್ಕಾರದ ಇತರ ಇಲಾಖೆಗಳೂ  ಪ್ರಮಾಣಪತ್ರಗಳನ್ನು ಇದೇ ರೂಪದಲ್ಲಿ ನೀಡಲು ತಿಳಿಸಿದ್ದೇವೆ. ಪ್ಯಾನ್‌, ಮತದಾ ರರ ಗುರುತಿನ ಚೀಟಿಗಳನ್ನು ಡಿಜಿಟಲ್‌ ರೂಪದಲ್ಲಿ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದು ಶರ್ಮಾ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳ ಜತೆ ಸಮಾಲೋಚನೆ ನಡೆಸಿರುವ ಮಾಹಿತಿ ತಂತ್ರಜ್ಞಾನ ಇಲಾಖೆ ಎಲ್‌ಪಿಜಿ ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ ನೀಡುವಂತೆ ಕೋರಿದೆ. ರಾಜ್ಯ ಸರ್ಕಾರ ಗಳೂ ಸಹ ಪಡಿತರ ಚೀಟಿಗಳನ್ನು ಡಿಜಿ ಟಲ್ ರೂಪದಲ್ಲಿ ನೀಡಬಹುದು ಎಂದು ಹೇಳಿದರು.

ಏನಿದು ಡಿಜಿಟಲ್‌ ಲಾಕರ್‌ ?: ಫೆ.10 ರಂದು ಮಾಹಿತಿ ತಂತ್ರಜ್ಞಾನ ಇಲಾಖೆ ಡಿಜಿಟಲ್‌ ಲಾಕರ್ ಸೌಲಭ್ಯಕ್ಕೆ ಚಾಲನೆ ನೀಡಿತು.  ಆಧಾರ್‌ ಸಂಖ್ಯೆ ಇರುವವರು ಇದರ ಉಪಯೋಗ ಪಡೆಯಬಹುದು. ಪ್ರಮಾಣಪತ್ರಗಳನ್ನು ಕಾಗದ ರೂಪದಲ್ಲಿ ಬಳಸುವುದನ್ನು ಇದರಿಂದ ತಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.