ADVERTISEMENT

ಗುಂಪು ಘರ್ಷಣೆ– ಲಾಠಿ ಪ್ರಹಾರ

ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 20:01 IST
Last Updated 4 ಜುಲೈ 2015, 20:01 IST

ಹುಣಸೂರು (ಮೈಸೂರು ಜಿಲ್ಲೆ): ತಾಲ್ಲೂಕಿನ ಹಳೆಬೀಡು ಗ್ರಾಮದಲ್ಲಿ ಶನಿವಾರ ನಡೆದ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಗುಂಪು ಘರ್ಷಣೆ ನಡೆದಿದೆ. ಗಲಭೆಯನ್ನು ನಿಯಂ ತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿದ ಘಟನೆ ನಡೆದಿದೆ.

ಘಟನೆಯ ವಿವರ:  ಗ್ರಾಮದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಬೆಂಬಲಿತ ಪಂಚಾಯಿತಿ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಆಕಾಂಕ್ಷಿಗಳು ಆಯೋಜಿಸಿದ್ದ, ‘ಚುನಾವಣಾ ಪ್ರವಾಸ’ ಮುಗಿಸಿಕೊಂಡು ಶನಿವಾರ ನೇರವಾಗಿ ಪಂಚಾಯಿತಿ ಕಚೇರಿಗೆ ಬಂದರು ಎನ್ನಲಾಗಿದೆ. ಆ ವೇಳೆ ಕೆಲ ಕಾಂಗ್ರೆಸ್‌ ಬೆಂಬಲಿಗರು ಹಾಗೂ ಪಂಚಾಯಿತಿ ಸದಸ್ಯ ಮಹೇಶ್‌, ಜೆಡಿಎಸ್‌ ಬೆಂಬಲಿತ ಸದಸ್ಯರ ಮೇಲೆ ಖಾರದ ಪುಡಿ ಎರಚಿದಾಗ ಘರ್ಷಣೆ ಆರಂಭವಾ ಯಿತು ಎನ್ನಲಾಗಿದೆ.

ಘರ್ಷಣೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ ಅನಿವಾರ್ಯವಾಗಿ ಅಶ್ರು ವಾಯು ಸಿಡಿಸಿ, ಲಾಠಿಪ್ರಹಾರ ನಡೆಸ ಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಸಾರ್ವಜ ನಿಕರು ಸೇರಿ, ಹುಣಸೂರು ಸಿಪಿಐ ಧರ್ಮೇಂದ್ರ, ಕಾನ್‌ಸ್ಟೆಬಲ್‌ಗಳಾದ ಆನಂದ್‌, ಪುರು ಷೋತ್ತಮ, ಶಿವಣ್ಣ ಮತ್ತು ಬಸವಣ್ಣ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT