ADVERTISEMENT

ದೀಪಾವಳಿ: ವಿಶೇಷ ರೈಲುಗಳ ಸಂಚಾರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

ಹುಬ್ಬಳ್ಳಿ:  ದೀಪಾವಳಿ ಹಬ್ಬದ ಅಂಗ ವಾಗಿ ಪ್ರಯಾ ಣಿಕರ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆಯು ಸೂಪರ್‌ ಫಾಸ್ಟ್‌ ವಿಶೇಷ ರೈಲು ವ್ಯವಸ್ಥೆ ಮಾಡಿದೆ.

ಯಶವಂತಪುರ– ಹುಬ್ಬಳ್ಳಿ ನಡುವೆ ಒಂದು ಬಾರಿ ವಿಶೇಷ ರೈಲು ಸಂಚರಿಸಲಿದೆ. ಇದೇ 22ರಂದು ರಾತ್ರಿ 8.40ಕ್ಕೆ ಯಶವಂತಪುರದಿಂದ ಹೊರ ಡುವ ರೈಲು (ನಂ. 02677) ಮಾರನೇ ದಿನ ಬೆಳಗ್ಗೆ 4.45ಕ್ಕೆ ಹುಬ್ಬಳ್ಳಿ ತಲುಪುತ್ತದೆ.

ಯಶವಂತಪುರ–ನಾಗರ ಕೊಯಿಲ್‌ ನಡುವೆ ವಿಶೇಷ ರೈಲು ಎರಡು ಬಾರಿ ಸಂಚರಿಸಲಿದೆ. ಇದೇ 21ರಂದು ರಾತ್ರಿ 9.15ಕ್ಕೆ ಯಶವಂತಪುರದಿಂದ ಹೊರ ಡುವ ರೈಲು (ನಂ. 02689) ಮಾರನೇ ದಿನ ಬೆಳಿಗ್ಗೆ 9.20ಕ್ಕೆ ನಾಗರಕೊಯಿಲ್‌ ತಲುಪುವುದು.

25ರಂದು ರಾತ್ರಿ 10.30ಕ್ಕೆ ಯಶವಂತಪುರದಿಂದ ಹೊರ ಡುವ ರೈಲು (ನಂ. 06598) ಮಾರನೇ ದಿನ ಮಧ್ಯಾಹ್ನ 2.30ಕ್ಕೆ ನಾಗರ ಕೊಯಿಲ್‌ ತಲುಪುವುದು.

ಅದೇ ರೀತಿ 22ರಂದು ಮಧ್ಯಾಹ್ನ 2ಕ್ಕೆ ನಾಗರಕೊಯಿಲ್‌ನಿಂದ ಹೊರಡುವ ರೈಲು  (ನಂ. 06597) ಮಾರನೇ ದಿನ ಬೆಳಗಿನ ಜಾವ 4ಕ್ಕೆ ಯಶವಂತಪುರ ತಲುಪುವುದು.

26ರಂದು ನಾಗರ ಕೊಯಿಲ್‌ನಿಂದ ಸಂಜೆ 4.40ಕ್ಕೆ ಹೊರಡುವ ರೈಲು (ನಂ. 06599) ಮಾರನೇ ದಿನ ಬೆಳಿಗ್ಗೆ 8ಕ್ಕೆ ಯಶವಂತಪುರ ತಲುಪುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.