ADVERTISEMENT

ಹಾಲಿನ ಮೇಲೆ ವಿಚಕ್ಷಣ ದಳದ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 16:38 IST
Last Updated 23 ಆಗಸ್ಟ್ 2018, 16:38 IST
   

ಶಿವಮೊಗ್ಗ: ಹಾಲಿನ ಕಲಬೆರಕೆ ಪ್ರಕರಣಗಳ ಪತ್ತೆಗೆ ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್‌) ಮೂರು ವಿಚಕ್ಷಣ ದಳ ರಚಿಸಿದೆ.

ಹಾಸನ ಹಾಲು ಒಕ್ಕೂಟದ ವ್ಯಾಪ್ತಿಗೆ ಒಳಪಡುವ ಚಿಕ್ಕಮಗಳೂರು ಜಿಲ್ಲೆಯ ಕೆಲವು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಅಧಿಕ ಕೊಂಬಿನ ಅಂಶ ತೋರಿಸಲು ರಾಸಾಯನಿಕ ಬಳಕೆ ಮಾಡಿದಪ್ರಕರಣ ಬೆಳಕಿಗೆ ಬಂದ ನಂತರ ಶಿಮುಲ್ ತನ್ನ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾವಹಿಸಿದೆ.

ಪ್ರತಿ ಜಿಲ್ಲೆಗೂ ಒಂದು ವಿಚಕ್ಷಣ ದಳ ನಿಯೋಜಿಸಲಾಗಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಹಾಲಿನ ಶೇಖರಣಾ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿ ಹಾಲಿನ ಗುಣಮಟ್ಟ ಪರಿಶೀಲಿಸಲಿವೆ.ಜತೆಗೆ, ಸಹಾಯಕ ವ್ಯವಸ್ಥಾಪಕರು, ಉಪವ್ಯವಸ್ಥಾಪಕರು,ಕ್ಷೇತ್ರ ವಿಸ್ತರಣಾಧಿಕಾರಿಗಳುಹಾಲಿನ ಗುಟ್ಟಮಟ್ಟದ ಮೇಲೆ ನಿಗಾ ವಹಿಸಿದ್ದಾರೆ.

ADVERTISEMENT

‘ಮೂರೂ ಜಿಲ್ಲೆಗಳ ವ್ಯಾಪ್ತಿಯಲ್ಲಿ 61,403 ಹಾಲು ಉತ್ಪಾದಕರಿಂದ ನಿತ್ಯವೂ 4 ಲಕ್ಷ ಲೀಟರ್‌ ಹಾಲು ಖರೀದಿಸಲಾಗುತ್ತಿದೆ.63 ಹಾಲು ಸಂಗ್ರಹ ಕೇಂದ್ರ (ಬಲ್ಕ್‌ ಮಿಲ್ಕ್ ಸೆಂಟರ್)ಗಳಿವೆ. ಇದುವರೆಗೂ ಅಂತಹ ಪ್ರಕರಣ ಪತ್ತೆಯಾಗಿಲ್ಲ. ಆದರೂತಪಾಸಣೆ ಮತ್ತಷ್ಟು ಬಿಗಿ ಮಾಡಲಾಗಿದೆ’ ಎಂದು ಶಿಮುಲ್‌ ವ್ಯವಸ್ಥಾಪಕ ನಿರ್ದೇಶಕಡಾ.ಚಂದ್ರಶೇಖರ್ ತಿಳಿಸಿದರು.

‘ಗುಣಮಟ್ಟದ ಹಾಲು ಖರೀದಿ; ಕಲಬೆರಕೆ ಇಲ್ಲ’

ಹಾಸನ: ಡೇರಿಗಳಿಗೆ ಕಲಬೆರಕೆ ಹಾಲು ಪೂರೈಕೆ ಆಗುತ್ತಿಲ್ಲ ಎಂದು ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲಯ್ಯ ತಿಳಿಸಿದರು.

‘ಹಾಲಿನಲ್ಲಿ ನೀರಿನಾಂಶ ಇರುವುದು ಸಹಜ. ಆದರೆ ಸತತ ಮಳೆಯಿಂದಾಗಿ ನೀರಿನಾಂಶ ಹೆಚ್ಚಾಗಿಲ್ಲ. ಹಾಲಿನಲ್ಲಿ ಎಷ್ಟು ಪ್ರಮಾಣದ ನೀರಿದೆ ಮತ್ತು ಗುಣಮಟ್ಟ ಹೇಗಿದೆ ಎಂಬುದನ್ನು ಉಪಕರಣದಿಂದ ಪತ್ತೆ ಮಾಡಲಾಗುತ್ತದೆ. ಗುಣಮಟ್ಟದ ಮಾನದಂಡದ ಅನುಸಾರವೇ ಉತ್ಪಾದಕರಿಂದ ಹಾಲು ಖರೀದಿಸಲಾಗುತ್ತಿದೆ. ಕಲಬೆರಕೆ ಹಾಲು ಪೂರೈಕೆ ಆಗುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.