ADVERTISEMENT

ಉಗ್ರರಿಂದ ಮಸೀದಿ, ಗೋಪುರ ಧ್ವಂಸ

ಏಜೆನ್ಸೀಸ್
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಉಗ್ರರಿಂದ ಮಸೀದಿ, ಗೋಪುರ ಧ್ವಂಸ
ಉಗ್ರರಿಂದ ಮಸೀದಿ, ಗೋಪುರ ಧ್ವಂಸ   

ಇರ್ಬಿಲ್‌, ಇರಾಕ್‌: ಇಲ್ಲಿನ ಮೊಸುಲ್‌ ನಗರದಲ್ಲಿದ್ದ 12ನೇ ಶತಮಾನದ ಅಲ್‌–ನುರಿ ಮಸೀದಿ ಮತ್ತು ಅಲ್‌–ಹಡ್ಬ ಗೋಪುರವನ್ನು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು ಗುರುವಾರ ತಡರಾತ್ರಿ ಧ್ವಂಸಗೊಳಿಸಿದ್ದಾರೆ.

‘ಪುರಾತನ ಮಸೀದಿ ಮತ್ತು ಗೋಪುರದ ಮೇಲೆ ಉಗ್ರರು ದಾಳಿ ಮಾಡುವ ಮೂಲಕ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ’ ಎಂದು ಪ್ರಧಾನಿ ಹೈದರ್‌ ಅಲ್‌–ಅಬಾದಿ ಟ್ವೀಟ್‌ ಮಾಡಿದ್ದಾರೆ.

ಅಲ್‌–ನುರಿ ಮಸೀದಿ, ಮೊಸುಲ್‌ನ ಮಹಾ ಮಸೀದಿ ಎಂದೂ ಹೆಸರಾಗಿದೆ. ಉಗ್ರರು 2014ರಲ್ಲಿ ಮೊಸುಲ್‌ ನಗರವನ್ನು ವಶಪಡಿಸಿಕೊಂಡಿದ್ದ ಸಂದರ್ಭದಲ್ಲಿ ಐಎಸ್‌ ಮುಖಂಡ ಅಬು ಬಕರ್‌ ಅಲ್‌–ಬಗ್ದಾದಿ, ಇಸ್ಲಾಂ ಅನುಸಾರ ಅಧಿಕಾರ ನಡೆಸುವುದಾಗಿ ಘೋಷಿಸಿದ್ದರು.

ADVERTISEMENT

**

ಬಂಧಿತರ ಬಿಡುಗಡೆ
ಲಾಹೋರ್: ವಾಘಾ ಗಡಿ  ಮೂಲಕ ಪಾಕಿಸ್ತಾನ ತಲುಪಿದ್ದ ನಾಲ್ವರು ಭಾರತೀಯರನ್ನು ಪಾಕಿಸ್ತಾನ ಸೇನೆ ವಿಚಾರಣೆ ಭಾರತಕ್ಕೆ ಹಸ್ತಾಂತರಿಸಿದೆ.
ಇದು ಉದ್ದೇಶ ಪೂರ್ವಕವಲ್ಲದ ನುಸುಳುವಿಕೆ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಗಡಿ ಭದ್ರತಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

**

ವೀಸಾ ನೀತಿ ಪರಿಷ್ಕರಣೆ: ಪಾಕ್‌
ಇಸ್ಲಾಮಾಬಾದ್‌: 
ಚೀನಾ ನಾಗರಿಕರಿಗೆ  ವೀಸಾ ನೀಡುವುದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು ಎಂದು ಪಾಕಿಸ್ತಾನ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.