ADVERTISEMENT

‘ಉಗ್ರ ಹಫೀಜ್‌ ಪಾಕ್‌ಗೂ ಅಪಾಯಕಾರಿ’

ಪಿಟಿಐ
Published 21 ಫೆಬ್ರುವರಿ 2017, 20:27 IST
Last Updated 21 ಫೆಬ್ರುವರಿ 2017, 20:27 IST
‘ಉಗ್ರ  ಹಫೀಜ್‌ ಪಾಕ್‌ಗೂ ಅಪಾಯಕಾರಿ’
‘ಉಗ್ರ ಹಫೀಜ್‌ ಪಾಕ್‌ಗೂ ಅಪಾಯಕಾರಿ’   

ಇಸ್ಲಾಮಾಬಾದ್‌: ಜಮಾತ್‌ ಉದ್‌ ದವಾ ಮುಖ್ಯಸ್ಥ (ಜೆಯುಡಿ) ಹಾಗೂ ಗೃಹಬಂಧನದಲ್ಲಿರುವ  ಉಗ್ರ ಹಫೀಜ್‌ ಸಯೀದ್‌ ಪಾಕಿಸ್ತಾನಕ್ಕೂ ‘ಅಪಾಯಕಾರಿ ಮನುಷ್ಯ’ ಎಂದು ರಕ್ಷಣಾ ಸಚಿವ ಖ್ವಾಜಾ ಅಸೀಫ್‌ ಹೇಳಿಕೆ ನೀಡಿದ್ದಾರೆ.

ಜರ್ಮನಿಯ ಮ್ಯೂನಿಚ್‌ನಲ್ಲಿ  ಏರ್ಪಡಿಸಿದ್ದ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನಕ್ಕೂ ಆತ  ಬೆದರಿಕೆ ಒಡ್ಡಬಲ್ಲ ವ್ಯಕ್ತಿ. ದೇಶದ ಹಿತದೃಷ್ಟಿಯಿಂದಲೇ  ಆತನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ’ ಎಂದು ತಿಳಿಸಿರುವುದಾಗಿ ‘ದಿ ನೇಷನ್‌’ ವರದಿ ಮಾಡಿದೆ.

ಶಸ್ತ್ರಾಸ್ತ್ರ ಪರವಾನಗಿ ರದ್ದು: ಹಫೀಜ್‌ ಸಯೀದ್ ಮತ್ತು ಈತನ ಸಹಚರರಿಗೆ ನೀಡಿದ್ದ 44 ಶಸ್ತ್ರಾಸ್ತ್ರ ಪರವಾನಗಿಯನ್ನು ಪಾಕಿಸ್ತಾನ ರದ್ದು ಮಾಡಿದೆ. ಭದ್ರತಾ ಕಾರಣ ನೀಡಿ ಈ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.