ADVERTISEMENT

ಬಲಿಯಾದವರ ಸಂಖ್ಯೆ 148ಕ್ಕೆ ಏರಿಕೆ

ಪಾಕಿಸ್ತಾನದ ಸೇನಾ ಶಾಲೆಯಲ್ಲಿ ಹತ್ಯಾಕಾಂಡ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2014, 19:30 IST
Last Updated 17 ಡಿಸೆಂಬರ್ 2014, 19:30 IST

ಇಸ್ಲಾಮಾಬಾದ್‌ (ಐಎಎನ್‌ಎಸ್‌/ಇಎಫ್‌ಇ): ಸೇನಾ ಶಾಲೆಯಲ್ಲಿ ತಾಲಿಬಾನಿ ಉಗ್ರರು ನಡೆಸಿದ ಹತ್ಯಾಕಾಂಡದಲ್ಲಿ ಮೃತಪಟ್ಟವರ ಸಂಖ್ಯೆ 148ಕ್ಕೆ ಏರಿದೆ.

ಮೃತರಲ್ಲಿ 132 ವಿದ್ಯಾರ್ಥಿಗಳು ಮತ್ತು ಒಂಬತ್ತು ಶಾಲಾ ಸಿಬ್ಬಂದಿ ಸೇರಿದ್ದಾರೆ ಎಂದು ಸೇನೆಯ ಸಾರ್ವಜನಿಕ ಮಾಹಿತಿ ನಿರ್ದೇಶಕ ಜನರಲ್‌ ಆಸಿಮ್ ಬಾಜ್ವಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

122 ವಿದ್ಯಾರ್ಥಿಗಳು ಹಾಗೂ ಉಗ್ರರೊಂದಿಗೆ ಕಾದಾಟ ನಡೆಸಿದ ಒಂಬತ್ತು ಸೈನಿಕರು ಗಾಯಗೊಂಡಿದ್ದಾರೆ. ದಾಳಿ ಪ್ರಾರಂಭವಾದ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಸುಮಾರು 900 ಜನರಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಯಾರನ್ನೂ ಒತ್ತೆಯಾಳಾಗಿರಿಸಿಕೊಳ್ಳುವುದು ಉಗ್ರರ ಉದ್ದೇಶವಾಗಿರಲಿಲ್ಲ. ಸಾಧ್ಯವಾದಷ್ಟು ಜನರನ್ನು ಕೊಲ್ಲುವುದು ಅವರ ಗುರಿಯಾಗಿತ್ತು ಎಂದು ಹೇಳಿದರು.

ಸೇನಾ ಸಮವಸ್ತ್ರ ಧರಿಸಿದ್ದ ಏಳು ತಾಲಿಬಾನಿ ಉಗ್ರರು ಬೆಳಿಗ್ಗೆ ಹಿಂಬಾಗಿಲ ಮೂಲಕ ಶಾಲೆ ಪ್ರವೇಶಿಸಿದರು. ತರಗತಿಯಿಂದ

ಚಕ್ಕರ್‌ ಹೊಡೆದು ಬದುಕುಳಿದ!
ಸೇನಾ ಶಾಲೆಯ ಮೇಲೆ ತಾಲಿಬಾನ್‌ ಉಗ್ರರು ನಡೆಸಿದ ದಾಳಿ­ಯಲ್ಲಿ ೧೫ ವರ್ಷದ ದಾವೂದ್‌ ಇಬ್ರಾಹಿಂ ಅದೃಷ್ಟವಶಾತ್‌ ಬದುಕುಳಿ­ದಿದ್ದಾನೆ. ೯ನೇ ತರಗತಿಯ ಈತನ ಸಹಪಾಠಿ­ಗಳೆಲ್ಲರೂ ದಾಳಿಗೆ ಬಲಿಯಾಗಿದ್ದಾರೆ.
ಸೋಮವಾರ ರಾತ್ರಿ ಈ ಬಾಲಕ ಮದುವೆ ಸಮಾರಂಭ
ವೊಂದಕ್ಕೆ ದಾವೂದ್‌ ಹೋಗಿದ್ದ. ತಡ ರಾತ್ರಿ ಮಲಗಿದ ಕಾರಣ  ಮಂಗಳ­ವಾರ ಬೆಳಿಗ್ಗೆ ಆತನಿಗೆ ಎಚ್ಚರವೇ ಆಗಲಿಲ್ಲ. ಹಾಗಾಗಿ ಶಾಲೆಗೆ ಚಕ್ಕರ್‌ ಹೊಡೆದಿದ್ದ.

ಇನ್ನೊಂದು ತರಗತಿಗೆ ತೆರಳಿ ಗ್ರೆನೇಡ್‌ಗಳನ್ನು ಎಸೆದು ಗುಂಡು ಹಾರಿಸಿದರು ಎಂದು ಪೊಲೀಸ್‌ ವಕ್ತಾರ ಸಯೀದ್‌ ವಾಲಿ ತಿಳಿಸಿದರು.

ವಿಮಾನ ಸಂಚಾರ ರದ್ದು: ಉಗ್ರರ ದಾಳಿಯ ಕಾರಣ ಯುಎಇಯ ಎಮಿರೆಟ್ಸ್‌ ಏರ್‌ಲೈನ್ಸ್‌ ಪೆಶಾವರಕ್ಕೆ ವಿಮಾನ ಸಂಚಾರ ರದ್ದುಗೊಳಿಸಿದೆ.

ನರೈ ಹತ್ಯಾಕಾಂಡದ ಸಂಚುಕೋರ
ಪೆಶಾವರದ ಸೇನಾ ಶಾಲೆಯ ಮೇಲೆ ನಡೆದ ಪೈಶಾಚಿಕ ದಾಳಿಯ ಸಂಚು­ಕೋರ ತಾಲಿಬಾನ್‌ ಕಮಾಂಡರ್‌ ಉಮರ್‌ ನರೈ ಎನ್ನುವುದು ಖಚಿತಪಟ್ಟಿದೆ.

ADVERTISEMENT

ಇನ್ನೊಂದು ಬೆಳವಣಿಗೆಯಲ್ಲಿ, ತೆಹ್ರಿಕ್‌–ಎ– ತಾಲಿಬಾನ್‌  ಮುಖಂಡ ಮುಲ್ಲಾ ಫಜುಲ್ಲಾನ ಹಸ್ತಾಂತರಕ್ಕೆ ಕೋರಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್‌ ರಹೀಲ್‌ ಷರೀಫ್‌ ಅವರು ಬುಧವಾರ ತುರ್ತಾಗಿ ಆಫ್ಘಾನಿಸ್ತಾನಕ್ಕೆ ತೆರಳಿದ್ದಾರೆ.
 

ಭಯೋತ್ಪಾದನೆಗೆ ಸಂಬಂಧಿಸಿ ಪ್ರಧಾನಿ ಷರೀಫ್‌ ಅವರು ಆಫ್ಘನ್‌ ಅಧ್ಯಕ್ಷ ಅಷ್ರಫ್‌ ಘನಿ ಅವರೊಂದಿಗೆ ಮಾತನಾಡಿದ ಬೆನ್ನಲ್ಲೇ ರಹೀಲ್‌ ಆಫ್ಘಾನಿಸ್ತಾನಕ್ಕೆ ತೆರಳಿದ್ದಾರೆ.

ರಹೀಲ್‌ ಅವರು ಭಯೋತ್ಪಾದನೆ ನಿಗ್ರಹ  ಹಾಗೂ ಆಫ್ಘಾನಿಸ್ತಾನದಲ್ಲಿ ಅಡಗಿ­ಕೊಂಡಿ­ರುವ ಉಗ್ರರ ನಿರ್ನಾ­ಮಕ್ಕೆ  ಅಲ್ಲಿನ ಸೇನೆಯ ಜಂಟಿ  ಸಹಕಾರ ಕೋರಲಿದ್ದಾರೆ ಎಂದು  ಡಾನ್‌ ಪತ್ರಿಕೆ ವರದಿ ಮಾಡಿದೆ.

ನಿರ್ದೇಶನ: ಸೇನಾ ಶಾಲೆಯ ಮೇಲೆ ದಾಳಿ ನಡೆಸುವುದಕ್ಕೆ ಉಮರ್‌ ನರೆ ನಿರ್ದೇಶನ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಉಮರ್‌  ಸಂಭಾಷಣೆಯನ್ನು ಭದ್ರತಾ­ಪಡೆ­ಗಳು ರಹಸ್ಯವಾಗಿ  ಆಲಿ­ಸಿದ್ದು, ಇದ­ರಿಂದ ಆತನ ನೆಲೆ ಪತ್ತೆ ಮಾಡು­ವುದಕ್ಕೆ ನೆರ­ವಾ­­ಯಿತು. ಈ ಮಾಹಿತಿ­ಯನ್ನು ಆಫ್ಘನ್ ಮಾತ್ರ­­ವಲ್ಲದೆ ನ್ಯಾಟೊ ಪಡೆಗಳಿಗೂ ರವಾನಿಸ­ಲಾ­ಗಿದೆ.

ತೆಹ್ರಿಕ್‌– ಎ– ತಾಲಿಬಾನ್‌ ಪಾಕಿಸ್ತಾನ್‌ (ಪಿಪಿಪಿ) ಅಡುತಾಣಗಳ  ಮೇಲೆ ತಕ್ಷಣವೇ ದಾಳಿ ನಡೆಸಲು ಪಾಕಿಸ್ತಾನ ಬಯಸಿದೆ. ಒಂದು ವೇಳೆ ಆಫ್ಘಾನಿಸ್ತಾನವು ಸಕಾಲದಲ್ಲಿ ಈ ಕೆಲಸ ಮಾಡದಿದ್ದರೆ ನಾವು ಎಲ್ಲ ಆಯ್ಕೆಗಳನ್ನು ಶೋಧಿಸುತ್ತೇವೆ ಎಂದು ಮೂಲಗಳು ಹೇಳಿದ್ದಾಗಿ ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.