ADVERTISEMENT

‘ಬ್ಲ್ಯಾಕ್‌ಮೇಲ್‌ ನಿಲ್ಲುವವರೆಗೂ ಅಣ್ವಸ್ತ್ರ ಪರೀಕ್ಷೆ’

ಏಜೆನ್ಸೀಸ್
Published 30 ಡಿಸೆಂಬರ್ 2017, 20:13 IST
Last Updated 30 ಡಿಸೆಂಬರ್ 2017, 20:13 IST

ಸೋಲ್: ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಬ್ಲ್ಯಾಕ್‌ಮೇಲ್‌ ಮತ್ತು ಶಸ್ತ್ರಾಭ್ಯಾಸ ನಿಲ್ಲಿಸುವವರೆಗೂ ಅಣ್ವಸ್ತ್ರ ಪರೀಕ್ಷೆಗಳು ಮುಂದುವರಿಯಲಿವೆ ಎಂದು ಉತ್ತರ ಕೊರಿಯ ಶನಿವಾರ ತಿಳಿಸಿದೆ.

ಸ್ವಯಂ ರಕ್ಷಣೆಗೆ ಸೇನಾ ಸಾಮರ್ಥ್ಯ ಹೆಚ್ಚಿಸುವುದು ಸೇರಿದಂತೆ ಎಲ್ಲ ರೀತಿಯ ಕ್ರಮಗಳನ್ನು ಉತ್ತರ ಕೊರಿಯಾ ಕೈಗೊಳ್ಳಲಿದೆ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಉತ್ತರ ಕೊರಿಯಾಗೆ ಸಂಬಂಧಿಸಿದ ಅಮೆರಿಕದ ನೀತಿಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಉತ್ತರ ಕೊರಿಯಾ ತಿಳಿಸಿದೆ.

ADVERTISEMENT

ಸೆಪ್ಟೆಂಬರ್‌ನಲ್ಲಿ ಉತ್ತರ ಕೊರಿಯ ನಡೆಸಿದ ಖಂಡಾಂತರ ಕ್ಷಿಪಣಿ ಪರೀಕ್ಷೆ ಈತನಕದಲ್ಲಿ ಅತಿ ಹೆಚ್ಚು ಸಾಮರ್ಥ್ಯವುಳ್ಳದ್ದಾಗಿದೆ. ಇದರಿಂದಾಗಿ ಉತ್ತರ ಕೊರಿಯದ ಮೇಲಿನ ಅಂತರರಾಷ್ಟ್ರೀಯ ನಿರ್ಬಂಧ ಒತ್ತಡ ಹೆಚ್ಚುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.