ADVERTISEMENT

ಸೇನೆಯಲ್ಲಿ ತೃತೀಯಲಿಂಗಿಗಳ ಮೇಲಿನ ನಿಷೇಧ ರದ್ದು

ಅಮೆರಿಕದ ಮಹತ್ವದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST

ವಾಷಿಂಗ್ಟನ್ (ಪಿಟಿಐ): ಸೇನೆಯಲ್ಲಿ ಸೇವೆ ಸಲ್ಲಿಸದಂತೆ ತೃತೀಯ ಲಿಂಗಿಗಳ ಮೇಲೆ ಹೇರಿದ್ದ ನಿಷೇಧವನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಅಮೆರಿಕ ತೆಗೆದುಕೊಂಡಿದೆ.

‘ತೃತೀಯ ಲಿಂಗಿಗಳಿಗೆ ಸೇನೆಯಲ್ಲಿ ಇದ್ದ ನಿಷೇಧವನ್ನು ಅಂತ್ಯಗೊಳಿಸುತ್ತಿದ್ದೇವೆ’ ಎಂದು ರಕ್ಷಣಾ ಕಾರ್ಯದರ್ಶಿ ಆಷ್ಟನ್‌ ಕಾರ್ಟರ್ ಪೆಂಟಗಾನ್‌ನಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ನಿರ್ಧಾರವು ತಕ್ಷಣದಿಂದಲೇ ಜಾರಿಯಾಗಲಿದೆ. ಅಮೆರಿಕದ ತೃತೀಯ ಲಿಂಗಿಗಳು ಮುಕ್ತವಾಗಿ ಸೇವೆ ಸಲ್ಲಿಸಬಹುದು. ಅವರು ತೃತೀಯಲಿಂಗಿಗಳಾಗಿರುವ ಕಾರಣಕ್ಕೆ ಸೇವೆಯಿಂದ ಹೊರಹಾಕುವುದಿಲ್ಲ ಮತ್ತು  ಸೇನೆಯಿಂದ ಪ್ರತ್ಯೇಕಗೊಳಿಸುವುದಿಲ್ಲ’ ಎಂದು ಅವರು ಹೇಳಿದರು.
ವ್ಯಾಪಕ ಸ್ವಾಗತ: ಸರ್ಕಾರದ ನಿರ್ಧಾರಕ್ಕೆ ಅಮೆರಿಕದಾದ್ಯಂತ ಸಂತಸ ವ್ಯಕ್ತವಾಗಿದೆ. ತೃತೀಯಲಿಂಗಿಗಳ ಪರ ಹೋರಾಟಗಾರರು ಮತ್ತು ಮಾಧ್ಯಮಗಳು ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ, ಇದು ಒಬಾಮ ಆಡಳಿತವು ತನ್ನ ಸಾಮಾಜಿಕ ಕಾರ್ಯಸೂಚಿಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ರಿಪಬ್ಲಿಕನ್ ಪಕ್ಷ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.