ADVERTISEMENT

ಭೂಕೈಲಾಸ

​ಪ್ರಜಾವಾಣಿ ವಾರ್ತೆ
Published 26 ಜನವರಿ 2017, 19:30 IST
Last Updated 26 ಜನವರಿ 2017, 19:30 IST
ಭೂಕೈಲಾಸ
ಭೂಕೈಲಾಸ   

ಲಿಂಗಾಯಿತರು ಹೆಚ್ಚಾಗಿ ಕೈಲಾಸ, ಕೈಲಾಸ ನಿಲಯ ಎಂದೆಲ್ಲಾ ಇಡುತ್ತಾರೆ. ನಾನು ವಿಭಿನ್ನವಾಗಿ ಹೆಸರಿಡಬೇಕು ಎಂದುಕೊಂಡು ಭೂಕೈಲಾಸ ಎಂಬ ಹೆಸರಿಟ್ಟೆ. 1958ರಲ್ಲಿ ಬಿಡುಗಡೆಯಾದ ರಾಜಕುಮಾರ್‌ ಅವರ ಭೂಕೈಲಾಸ ಚಿತ್ರವೂ ನನ್ನ ನಿರ್ಧಾರಕ್ಕೆ ಪ್ರೇರಣೆಯಾಯಿತು ಎನ್ನಿ.

ಶಿವಭಕ್ತನಾಗಿ ರಾಜಕುಮಾರ್‌ ಅಭಿನಯಿಸಿದ್ದು ನನಗೆ ಖುಷಿ ಕೊಟ್ಟಿತು. ನಮ್ಮ ಮನೆಯ ಹೆಸರು ನನಗಂತೂ ಖುಷಿ ಕೊಟ್ಟಿದೆ. ನನ್ನ ಗೆಳೆಯರು ಮತ್ತು ಸಂಬಂಧಿಕರು ಸೋಮಣ್ಣನ ಮನೆಗೆ ಹೋಗಿದ್ದೆ ಎನ್ನುವುದಿಲ್ಲ. ‘ಭೂಕೈಲಾಸ’ಕ್ಕೆ ಹೋಗಿದ್ದೆ ಎನ್ನುತ್ತಾರೆ. ಕೇಳಲು ಖುಷಿ ಎನಿಸುತ್ತದೆ. ನಮ್ಮ ಮನೆ ಭೂಕೈಲಾಸದಂತೆಯೇ ಇರಲಿ ಎಂಬುದು ನನ್ನ ಆಸೆಯೂ ಹೌದು.
-ಕೆ.ಎಂ.ಸೋಮಣ್ಣ

*
ನಿಮ್ಮ ಮನೆಯ ಹೆಸರೇನು? ಆ ಹೆಸರು ಇಡಲು ಕಾರಣವೇನು? ಇಮೇಲ್– metropv@prajavani.co.in ವಾಟ್ಸ್‌ಆ್ಯಪ್– 9513322931

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT