ADVERTISEMENT

ಭಾನುವಾರ 30–7–1967

​ಪ್ರಜಾವಾಣಿ ವಾರ್ತೆ
Published 29 ಜುಲೈ 2017, 19:30 IST
Last Updated 29 ಜುಲೈ 2017, 19:30 IST

ಮಧ್ಯಪ್ರದೇಶ ಮುಖ್ಯಮಂತ್ರಿ  ಮಿಶ್ರಾ ರಾಜೀನಾಮೆ
ಭೋಪಾಲ್‌, ಜುಲೈ 29 :
ಮಧ್ಯಪ್ರದೇಶ ಮುಖ್ಯಮಂತ್ರಿ ಡಿ. ಪಿ ಮಿಶ್ರಾ ಅವರು ರಾಜ್ಯಪಾಲ ಕೆ. ಸಿ. ರೆಡ್ಡಿ ಅವರಿಗೆ  ರಾಜೀನಾಮೆ ಸಲ್ಲಿಸಿದರು.
ಶನಿವಾರ ರಾತ್ರಿ  ದೆಹಲಿಗೆ ತೆರಳಬೇಕಿದ್ದ ಅವರು ಕೊನೆ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದುಪಡಿಸಿದರು.

ವಿಧಾನಸಭೆಯಲ್ಲಿ ವಿಶ್ವಾಸಮತ  ಸಾಬೀತು ಪಡಿಸುವಲ್ಲಿ ಸರ್ಕಾರ ವಿಫಲವಾದ್ದರಿಂದ ಕಾಂಗ್ರೆಸ್‌ ಹೈಕಮಾಂಡ್‌ ರಾಜೀನಾಮೆ ನೀಡಲು ಮಿಶ್ರಾ ಅವರಿಗೆ ಸೂಚಿಸಿತ್ತು.

ವಿಧಾನಸಭೆಯನ್ನು ವಿಸರ್ಜಿಸುವುದು ಹೈಕಮಾಂಡ್‌ಗೆ ಇಷ್ಟವೆಲ್ಲವೆಂಬ  ಸಂಗತಿಯನ್ನು   ಕಾಂಗ್ರೆಸ್‌ ಅಧ್ಯಕ್ಷ ಕಾಮರಾಜ್‌ ಅವರು ಮಿಶ್ರಾ ಅವರಿಗೆ ತಿಳಿಸಿದ್ದರು. ಸರ್ಕಾರ ರಚಿಸಲು ಸಿದ್ಧವಿರುವುದಾಗಿ ಸಂಯುಕ್ತ ವಿಧಾಯಕ ದಳವು ರಾಜ್ಯಪಾಲರಿಗೆ ತಿಳಿಸಿದೆ.

ADVERTISEMENT

‘ಶಾಶ್ವತ ಹಣಕಾಸು ಆಯೋಗ ಇಲ್ಲ’
ಚೆನ್ನೈ, ಜುಲೈ 29:
  ಶಾಶ್ವತ ಹಣಕಾಸು ಆಯೋಗ ಇರುವುದಿಲ್ಲ ಎಂದು ಉಪ ಪ್ರಧಾನಿ ಮೊರಾರ್ಜಿ ದೇಸಾಯಿ ಹೇಳಿದರು. ಮದ್ರಾಸ್‌ ಪತ್ರಕರ್ತರ ಯೂನಿಯನ್‌ ಆಯೋಜಿಸಿದ್ದ ಸಂವಾದದಲ್ಲಿ  ಅವರು ಮಾತನಾಡಿದರು.

‘ಹಣಕಾಸು ಆಯೋಗವನ್ನು ಕಾಲಕಾಲಕ್ಕೆ ರಚಿಸಲಾಗುತ್ತದೆ. ಯೋಜನಾ ಆಯೋಗವು ಕೇಂದ್ರದಿಂದ ರಾಜ್ಯಗಳಿಗೆ ಅನುದಾನವನ್ನು ಹಂಚಿಕೆ ಮಾಡುತ್ತದೆ. ಕೇಂದ್ರ ಸರ್ಕಾರದ ಬಳಿ ಇರುವ ಹಣ ಕೇವಲ ಕೇಂದ್ರದಲ್ಲ. ಅದು ಇಡೀ ರಾಜ್ಯಕ್ಕೆ ಸೇರಿದ್ದು. ಇದನ್ನು ರಾಜ್ಯಗಳು ಮತ್ತು ಕೇಂದ್ರಕ್ಕೆ ಹಂಚಿಕೆ ಮಾಡಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.