ADVERTISEMENT

ಮಂಗಳವಾರ, 5–3–1968

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಮಂಗಳವಾರ, 5–3–1968
ಮಂಗಳವಾರ, 5–3–1968   

ಕಛ್ ತೀರ್ಪಿಗೆ ಸಂಸತ್ ಸಮ್ಮತಿ ಅಗತ್ಯ: ಲೋಕ ಸಭೆಯಲ್ಲಿ ವಿರೋಧ ಪಕ್ಷಗಳ ಒತ್ತಾಯ

ನವದೆಹಲಿ, ಮಾ. 4– ಸಂಸತ್ತಿನ ಸಮ್ಮತಿಯಿಲ್ಲದೆ ಕಛ್ ತೀರ್ಪಿನ ಜಾರಿಗೆ ಪಾಕಿಸ್ತಾನದ ಜತೆ ಸರ್ಕಾರ ಮಾತುಕತೆ ನಡೆಸಲು ಮುಂದುವರಿಯಬಾರದು– ಕೋಪೋದ್ರಿಕ್ತ ವಿರೋಧ ಪಕ್ಷದ ಈ ಒತ್ತಾಯಕ್ಕೆ ಕೆಲವು ಕಾಂಗ್ರೆಸ್ ಸದಸ್ಯರ ಬೆಂಬಲ.

ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಪರಾಭವವಾದುದರಿಂದ ಕಛ್ ತೀರ್ಪಿಗೆ ಸಭೆ ಒಪ್ಪಿದೆಯೆಂದು ಅರ್ಥವಲ್ಲ. ಈ  ವಿಷಯವನ್ನು ಪ್ರತ್ಯೇಕವಾಗಿ ಚರ್ಚಿಸಬೇಕು. ಅಟಲ ಬಿಹಾರಿ ವಾಜಪೇಯಿ ನಾಯಕತ್ವದಲ್ಲಿ ಲೋಕಸಭೆಯಲ್ಲಿ ಇಂದು ವಿರೋಧ ಪಕ್ಷಗಳ ನಾಯಕರ ಉಗ್ರ ವಾದ ಮಂಡನೆ.

ADVERTISEMENT

ಒಂದು ಘಟ್ಟದಲ್ಲಂತೂ ಸಭಾತ್ಯಾಗ ಮಾಡುವುದಾಗಿ ವಾಜಪೇಯಿ ಬೆದರಿಕೆ. ‘ಸರ್ಕಾರದ ಈಗಿನ ಮನೋವೃತ್ತಿಯೇ ಮುಂದುವರೆದರೆ ನಾವು ಇತರ ಮಾರ್ಗಗಳಿಗೆ ಇಳಿಯಬೇಕಾಗುತ್ತದೆ’ ಎಂಬ ಸೂಚನೆ.

ಹೊಸಪೇಟೆ ಉಕ್ಕಿನ ಕಾರ್ಖಾನೆ ‘ಪುನಃಸ್ಮರಣೆ’: ಕಾರ್ಯಗತ ಮಾಡಲು ಒತ್ತಾಯ

ಬೆಂಗಳೂರು, ಮಾ. 4– ‘ಮರೆತು ಬಿಟ್ಟಿರುವ’ ಹೊಸಪೇಟೆ ಉಕ್ಕಿನ ಕಾರ್ಖಾನೆ ಸ್ಥಾಪನೆ ವಿಷಯವನ್ನು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯರು ‘ನೆನಪು ಮಾಡಿಕೊಟ್ಟು’ ಅದರ ಸ್ಥಾಪನೆಗೆ ತೀವ್ರ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.