ADVERTISEMENT

ತುದಿನಾಲಿಗೆಯ ವಿಷಾದ!

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರನ್ನು ನಿಂದಿಸಿ, ಅವರಿಗೆ ‘ಚಪ್ಪಲಿಯಲ್ಲಿ ಹೊಡೆಯಿರಿ’ ಎಂದು ಕಾರ್ಯಕರ್ತರಿಗೆ ಕರೆನೀಡಿದ್ದ ಕಾಂಗ್ರೆಸ್‌ ಮುಖಂಡ ದಿನೇಶ್‌ ಗುಂಡುರಾವ್‌, ತಮ್ಮ ಹೇಳಿಕೆಗೆ ಟ್ವಿಟರ್‌ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಅದು ಮನಃಪೂರ್ವಕವಾಗಿ ಬಂದಂತೆ ಕಾಣಿಸುತ್ತಿಲ್ಲ.

‘ಅತ್ಯಾಚಾರಕ್ಕೊಳಗಾದ ವ್ಯಕ್ತಿಯ ದುರವಸ್ಥೆ... ಆದಿತ್ಯನಾಥ್ ನೇತೃತ್ವದ ಸರ್ಕಾರದ ನಿಷ್ಕ್ರಿಯತೆಯನ್ನು ಭಾವನಾತ್ಮಕವಾಗಿ ವಿವರಿಸುವ ಭರದಲ್ಲಿ ಈ ಮಾತು ಹೊರಹೊಮ್ಮಿದೆ. ಇದು ತಪ್ಪಾಗಿದ್ದರೆ ವಿಷಾದಿಸುತ್ತೇನೆ...’ ಎಂದು ಟ್ವೀಟ್‌ ಮಾಡಿದ್ದಾರೆ.

‘ತಪ್ಪಾಗಿದ್ದರೆ’ ಎನ್ನುವುದರ ಅರ್ಥವೇನು? ತಪ್ಪು ಎಂದು ಅವರಿಗೆ ಅನಿಸಲಿಲ್ಲವೇ? ಅದನ್ನು ಬೇರೆಯವರು ಹೇಳಬೇಕೇ? ಇದು ‘ತುದಿನಾಲಿಗೆಯ ವಿಷಾದ’ ಎಂಬುದು ಜನರಿಗೆ ಅರ್ಥವಾಗುತ್ತದೆ. ರಾಷ್ಟ್ರೀಯ ಪಕ್ಷವೊಂದರ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಗೆ ಇಂಥ ಹೇಳಿಕೆ ಹಾಗೂ ವರ್ತನೆ ಶೋಭೆ ತರುವುದಿಲ್ಲ.

ADVERTISEMENT

– ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.