ADVERTISEMENT

ನಾಡಿ ಹಿಡಿಯದ ಮಾತು

ಮಾಣಿಕರಾವ ಪಸಾರ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಮೊದ ಮೊದಲು ಉತ್ತೇಜನಕಾರಿಯೂ, ಪರಿಣಾಮಕಾರಿಯೂ, ವಾಸ್ತವಿಕವೂ ಎನಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ  ‘ಮನದ ಮಾತು’ ಬರಬರುತ್ತ ಅಪ್ರಸ್ತುತವೂ, ಅವಾಸ್ತವಿಕವೂ ಎನಿಸುತ್ತಿದೆ.

ಈ ತಿಂಗಳ 26ರಂದು  ‘ಮನದ  ಮಾತು’ ಕಾರ್ಯಕ್ರಮದಲ್ಲಿ ಪ್ರಧಾನಿ ಈ ಬಾರಿ ಮುಂಗಾರು ತೃಪ್ತಿಕರವಾಗಿದೆ ಎಂದು ಹೇಳಿದರು. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರೈತರ ಸರಣಿ ಆತ್ಮಹತ್ಯೆಯ ಬಗ್ಗೆ ಏನನ್ನೂ ಹೇಳಲೇ ಇಲ್ಲ. ರೈತರ ಆತ್ಯಹತ್ಯೆಯಂಥ ಜ್ವಲಂತ ಸಮಸ್ಯೆಗಳಿಗೆ ಮಿಡಿಯದ, ಸ್ಪಂದಿಸದ, ಜನಮನದ, ಜನಜೀವನದ ನಾಡಿ ಹಿಡಿಯದ  ‘ಮನದ ಮಾತು’ ಯಾರಿಗಾಗಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.