ADVERTISEMENT

ನಿರಾಶಾದಾಯಕ

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 19:30 IST
Last Updated 24 ಜೂನ್ 2016, 19:30 IST

‘ಮಠದ ಪೀಠಾಧಿಪತಿಯಾಗಲು ಹೆಣ್ಣು– ಗಂಡು ಎಂಬ ಬೇಧವಿಲ್ಲ. ನಮ್ಮ ಶಾಖಾಮಠಕ್ಕೆ ಮಹಿಳೆಯರನ್ನೇ ಪೀಠಾಧಿಪತಿ ಮಾಡಲು ನಾವು ಸಿದ್ಧರಿದ್ದೇವೆ’ (ಪ್ರ.ವಾ., ಜೂನ್‌ 22) ಎಂಬ ವೀರಭದ್ರ ಚನ್ನಮಲ್ಲ ಸ್ವಾಮಿ ಅವರ ಮಾತು ಅಭಿನಂದನೀಯ. ಆದರೆ ಮುಂದುವರೆದು ‘ಪೀಠಕ್ಕೆ ಯೋಗ್ಯರಾದ ಮಹಿಳೆ ದೊರಕಬೇಕಷ್ಟೆ’ ಎಂಬ ಮಾತು ಅವರ ಮನೋಭಾವಕ್ಕೆ ವಿರುದ್ಧವಾದುದು.

‘ಸಮಾನತೆಯ ಕಡೆಗೆ ನಮ್ಮ ನಡಿಗೆ’ ಎಂಬ ಬಿ.ಆರ್‌. ಅಂಬೇಡ್ಕರ್‌ರವರ  125ನೇ ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿರುವ ಪೂಜ್ಯ ಮಾತೆಯರ ಪಟ್ಟಿ ನೂರರ ಆಸುಪಾಸಿನಲ್ಲಿದೆ. ಇವರಲ್ಲಿ ಯಾರೊಬ್ಬರೂ ಪೀಠಾಧಿಪತಿಯಾಗಲು ಯೋಗ್ಯರಿಲ್ಲವೇ? ನಿಜಕ್ಕೂ ಇದು ಹೆಣ್ಣು ಕುಲಕ್ಕೆ ಅವಮಾನ. ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಗೌರವವನ್ನು ಹೊಂದಿರುವ ಚನ್ನಮಲ್ಲ ಸ್ವಾಮಿ ಅವರ ಈ ಹೇಳಿಕೆ ನಿಜಕ್ಕೂ ನಿರಾಶಾದಾಯಕವಾದುದು.

ಮಹಿಳೆಯರಲ್ಲೂ ಪೀಠಾಧಿಪತಿಯಾಗಲು ಪುರುಷರಿಗಿಂತ ಹೆಚ್ಚಿನ ಯೋಗ್ಯರು ಖಂಡಿತಾ ಇದ್ದಾರೆ.  ಪ್ರಗತಿಪರ ಚಿಂತಕರಾದ  ಸ್ವಾಮೀಜಿ, ತಮ್ಮ ಘೋಷಣೆಗೆ ಬದ್ಧರಾಗಬೇಕು. ಅದನ್ನು ಕಾರ್ಯರೂಪಕ್ಕೆ ತರಲು  ಆದಷ್ಟು ಬೇಗ ತಮ್ಮ ಶಾಖಾಮಠಕ್ಕೆ ಒಬ್ಬ ಮಹಿಳಾ ಪೀಠಾಧಿಪತಿಯನ್ನು ನೇಮಿಸುವ ಮೂಲಕ ಧಾರ್ಮಿಕ ಕ್ರಾಂತಿಯ ಆದ್ಯ ಪ್ರವರ್ತಕರಾಗಲಿ.

ಪ್ರೊ. ಎನ್‌.ವಿ. ಅಂಬಾಮಣಿ ಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.