ADVERTISEMENT

ಪ್ರಯತ್ನ ಬಿರುಸುಗೊಳಿಸಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 19:30 IST
Last Updated 13 ಸೆಪ್ಟೆಂಬರ್ 2017, 19:30 IST

‘ವಿಶ್ವ ಲಿಂಗಾಯತ ಮಹಾಸಭಾ ಶೀಘ್ರ ಅಸ್ತಿತ್ವಕ್ಕೆ’ (ಪ್ರ.ವಾ., ಸೆ. 8) ತಲೆಬರಹದ ಸುದ್ದಿ ಓದಿ ಸಂತಸವಾಯಿತು. ವಿಶ್ವ ಲಿಂಗಾಯತ ಮಹಾಸಭಾವನ್ನು ಸ್ಥಾಪಿಸಲು ಲಿಂಗಾಯತ ಧರ್ಮದಲ್ಲಿ ನಂಬಿಕೆ ಇಟ್ಟ ಜನಸಾಮಾನ್ಯರು, ಹರಗುರುಗಳು ಬೆಳಗಾವಿಯ ಸಮಾವೇಶದಲ್ಲಿ ಈಗಾಗಲೇ ನಿರ್ಣಯಿಸಿದ್ದಾರೆ. ಈ ತಿಂಗಳ 24ರಂದು  ಕಲಬುರ್ಗಿಯಲ್ಲೂ ಸಮಾವೇಶ ಜರುಗಲಿದೆ. ಈ ಹೊಸ ಮಹಾಸಭಾ ಅಸ್ತಿತ್ವಕ್ಕೆ ಬರಬಾರದೆಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಅವರ ಪ್ರಯತ್ನ ಸಫಲವಾಗಲು ಬಿಡಬಾರದು.

ಬಸವರಾಜ ಹೊರಟ್ಟಿ ಮತ್ತು ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ. ಜಾಮದಾರ ಅವರು ನಿರ್ಭೀತಿಯಿಂದ ಮುಂದುವರಿಯಲಿ. ವೀರಶೈವ ಲಿಂಗಾಯತ ಮಹಾಸಭಾದವರನ್ನು ಅವರ ಪಾಡಿಗೆ ಬಿಟ್ಟುಬಿಡಿ.

ಹೊಸ ಮಹಾಸಭಾವನ್ನು ಅಸ್ತಿತ್ವಕ್ಕೆ ತರಲು ಸಕಲ ಪ್ರಯತ್ನಗಳನ್ನು ಇನ್ನಷ್ಟು ಬಿರುಸುಗೊಳಿಸಲಿ. ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಪ್ರತಿನಿಧಿಗಳನ್ನು ಕಳುಹಿಸಿ ಜನರ ಬೆಂಬಲ ಗಳಿಸಲಿ. ಮುಂದಿಟ್ಟ ಹೆಜ್ಜೆ ಹಿಂದೆ ಸರಿಯದಿರಲಿ. ಬಸವ ಅನುಯಾಯಿಗಳಿಗೆ ಕೊರತೆಯಿಲ್ಲ. ಬಸವಾ ಎಂದರೆ ಶುಭವಾಗುವುದು.

ADVERTISEMENT

– ಸಂಗಪ್ಪ ಗಾಣಿಗೇರ, ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.