ADVERTISEMENT

ಸಂಸ್ಕಾರ ಮೂಡಿಸುವುದು ಅಗತ್ಯ

ಉಮಾ ಘಿವಾರಿ, ತಾಳಿಕೋಟೆ
Published 29 ಜುಲೈ 2014, 19:30 IST
Last Updated 29 ಜುಲೈ 2014, 19:30 IST

ಅತ್ಯಾಚಾರ ಪ್ರಕರಣಗಳು ಹೆಚ್ಚಿಗೆ ವರದಿಯಾಗುತ್ತಿವೆ. ಇದಕ್ಕೆ ಮೂಲ ಕಾರಣ ಗುರುತಿಸಿ, ಸರಿಪಡಿಸಲು ಕ್ರಮ ಜರುಗಿಸುವುದು ಜರೂರಾಗಿ ಆಗಬೇಕು. ಇದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿ,  ಭಯ ವಾತಾವರಣವನ್ನು ಸೃಷ್ಟಿಸಿದೆ. ಇದರಲ್ಲಿ ಸಮಾಜ, ಕುಟುಂಬ, ಮಾಧ್ಯಮ ಎಲ್ಲದರ ಪಾಲೂ ಇದೆ. ಮನುಷ್ಯರ ಮೂಲ ಪ್ರವೃತ್ತಿ ವಿಕಾರಗೊಳ್ಳುತ್ತಿದೆ.  ಮಕ್ಕಳಿಗಷ್ಟೆ ಅಲ್ಲ, ವಯಸ್ಕರಿಗೂ ಸಂಸ್ಕಾರದ ಅವಶ್ಯಕತೆ ಇದೆ.

ಉತ್ತಮ ಸಂಸ್ಕಾರ ನೀಡುವಲ್ಲಿ ನಮ್ಮ  ವಿದ್ಯಾಸಂಸ್ಥೆಗಳು, ಶಿಕ್ಷಣ, ಮಠಮಾನ್ಯಗಳು, ಪೋಷಕರು ವಿಫಲಗೊಂಡಿರುವುದರಿಂದ ಇಂಥ ವಿಕೃತಿಗಳು ನಡೆಯುತ್ತಿವೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕು. ನಿವಾರಣೆಗೆ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.