ADVERTISEMENT

‘ಅಯ್ಯಾ’...ಅವಮಾನವೇ?

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST

ಶಿವಮೊಗ್ಗದ ಎನ್ನಾರ್‌. ವಾಸುದೇವ ರಾವ್‌ ಅವರ ‘ಏಕವಚನ ಬೇಡ’ (ವಾ. ವಾ., ಜುಲೈ 25) ಎಂಬ ಪತ್ರಕ್ಕೆ ಪ್ರತಿಕ್ರಿಯೆ. ಈ ಪತ್ರದಲ್ಲಿನ  ಅಭಿಪ್ರಾಯವು ಶಿಷ್ಟಾಚಾರ, ಆಚಾರ ಮತ್ತು ಭಾಷಿಕ ನೆಲೆಯಲ್ಲಿ  ಸರಿಯಾದುದು ಅಲ್ಲವೇ ಅಲ್ಲ.

ಕಾಗೋಡು ತಿಮ್ಮಪ್ಪನವರು  ಎಂಬತ್ತೈದು ವರ್ಷ ವಯಸ್ಸಿನ ಹಿರಿಯರು. ಅವರು ‘ಕೇಳಪ್ಪಾ ಇಲ್ಲಿ’, ‘ಏಯ್‌ ತಮ್ಮಾ’, ‘ಯಾರಪ್ಪಾ ಅಧಿಕಾರಿ’ ಎಂದರೆ ಅವರಿಗಿಂತ ವಯಸ್ಸಿನಲ್ಲಿ ತೀರಾ ಕಿರಿಯರಾದ ಯಾವುದೇ ಜನಸಾಮಾನ್ಯ ಇಲ್ಲವೇ ಅಧಿಕಾರಿ ಅದನ್ನು ‘ಏಕವಚನ’ ಎಂದು ಭಾವಿಸುವುದಿಲ್ಲ, ಭಾವಿಸಬಾರದು  ಕೂಡಾ.

‘ಅಯ್ಯಾ’ ಎಂದರೆ ಸ್ವರ್ಗ, ಅಲ್ಲವೇ? ‘ಏನಯ್ಯಾ’ ಎಂದಾಕ್ಷಣ ಏಕವಚನವೇ, ಅವಮಾನವೇ? ಇಲ್ಲಿ ಅವಮಾನಗೊಳಿಸಬೇಕೆನ್ನುವ ಯಾವುದೇ ದುರದ್ದೇಶ ಇಲ್ಲ ಎಂದು ಯಾರಿಗಾದರೂ ಅರ್ಥವಾಗುತ್ತದೆ, ಅಲ್ಲವೇ?

-ಪ್ರೊ. ಎಸ್.ಕೆ. ಕುಮಾರ್‌, ಹೊಸಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.