ADVERTISEMENT

ಮೆರವಣಿಗೆ– ಟೀಕೆ!

​ಸಿ.ಪಿ.ಕೆ.ಮೈಸೂರು
Published 10 ಮಾರ್ಚ್ 2019, 19:45 IST
Last Updated 10 ಮಾರ್ಚ್ 2019, 19:45 IST

‘ಶ್ರೀ ರಾಮಾಯಣ ದರ್ಶನಂ’ಗೆ ಮೈಸೂರಿನ ಅಪೂರ್ವ ಗೌರವ (ಪ್ರ.ವಾ., 50 ವರ್ಷಗಳ ಹಿಂದೆ,ಫೆ. 18). ಕುವೆಂಪು ಅವರ ಮಹಾಕಾವ್ಯವನ್ನು ಆನೆಯ ಮೇಲಿಟ್ಟು ಮೆರವಣಿಗೆ ಮಾಡಿದ ಸುದ್ದಿ. ‘ಟೀಕಾಚಾರ್ಯ’ರು ಎಲ್ಲ ಕಾಲದಲ್ಲೂ ಎಲ್ಲಿಯೂ ಇರುತ್ತಾರೆ.

‘ಆನೆಯೇಕೆ, ಒಂಟೆ ಸಿಗಲಿಲ್ಲವೇ?’ ಎಂಬ ವ್ಯಂಗ್ಯೋಕ್ತಿಯೂ ಕೇಳಿಬಂದುದುಂಟು (ನನಗೆ ನೆನಪಿದೆ, ಅನಾರೋಗ್ಯದಿಂದಾಗಿ ನಾನು ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ).

ಕಾವ್ಯದ ಬದಲು ಕವಿಯ ಮೆರವಣಿಗೆಯಾಗಿದ್ದರೆ, ಅಂಥ ಟೀಕೆಗೆ ಅರ್ಥವಿರುತ್ತಿತ್ತು!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.