ADVERTISEMENT

ಐಬ್ರೊಗೊಂದು ಹೊಸ ಲುಕ್ ‘ಬ್ರೊ ಕರ್ವಿಂಗ್‌’

​ಪ್ರಜಾವಾಣಿ ವಾರ್ತೆ
Published 20 ಜೂನ್ 2017, 19:30 IST
Last Updated 20 ಜೂನ್ 2017, 19:30 IST
ಐಬ್ರೊಗೊಂದು ಹೊಸ ಲುಕ್ ‘ಬ್ರೊ ಕರ್ವಿಂಗ್‌’
ಐಬ್ರೊಗೊಂದು ಹೊಸ ಲುಕ್ ‘ಬ್ರೊ ಕರ್ವಿಂಗ್‌’   

ಫ್ಯಾಷನ್‌  ಪ್ರಪಂಚದ ಅರಿವು ಬೆಳೆಸಿಕೊಳ್ಳುವ ಸಲುವಾಗಿಯೇ ಸಾಮಾಜಿಕ ಜಾಲತಾಣಗಳನ್ನು ತಡಕಾಡುವವರು ಅನೇಕರಿದ್ದಾರೆ. ಹೀಗೆ ಫ್ಯಾಷನ್‌ ಹುಡುಕಾಟ ನಡೆಸುವವರಿಗೆ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕಂಡ ‘ಬ್ರೊ ಕರ್ವಿಂಗ್‌’ ಕುತೂಹಲ ಹುಟ್ಟಿಸಿತು. ಇದು ಅಮೆರಿಕದ ಪ್ರಸಾಧನ ಕಲಾವಿದೆ ಅಲೆಕ್ಸಾಲಿಂಕ್‌ ಸೃಷ್ಟಿಸಿರುವ ಹೊಸ ಫ್ಯಾಷನ್‌.

ಐಬ್ರೊ ಪೆನ್ಸಿಲ್‌ನಿಂದ ಹುಬ್ಬುಗಳ ಮೇಲೆ  ಮತ್ತು ಕೆಳಗೆ ಹುಬ್ಬಿನ ಆಕಾರದಲ್ಲಿಯೇ ವಿವಿಧ ಶೇಡ್‌ಗಳನ್ನು ಮೂಡಿಸುವುದು ಈ ಫ್ಯಾಷನ್‌ ಶೈಲಿ. ದೂರದಿಂದ ನೋಡುವಾಗ ಈ ರೀತಿಯೇ ಐಬ್ರೊ ಮಾಡಿಸಿದಂತೆ ಕಾಣುತ್ತದೆ. ಮೆಲ್ಟಾ ಮತ್ತು ಸಿಗ್ಮಾ ಕಂಪೆನಿಯ ಪ್ರಸಾಧನ ಬಳಸಿದ್ದೇನೆ ಎಂದು ಅಲೆಕ್ಸಾ ಬರೆದುಕೊಂಡಿದ್ದರು.

ಪ್ರಸಾದನ ಕಲಾವಿದೆಯಾಗಿ ಸಾವಿರ ದಿನಗಳ ಸಂಭ್ರಮದಲ್ಲಿ ಈ ಹೊಸ ಶೈಲಿಯನ್ನು ಅಲೆಕ್ಸಾ ಸೃಷ್ಟಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 40 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ಲೈಕ್‌  ಮಾಡಿದ್ದಾರೆ.

ADVERTISEMENT

ಆಧುನಿಕ ಉಡುಪುಗೆ ಮಾತ್ರವೇ ಹೊಂದುವ ಈ ಫ್ಯಾಷನ್‌, ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಹ ಲುಕ್‌ ಇದು, ಜೊತೆಗೆ ರೂಪದರ್ಶಿಯರಿಗೆ ಸುಂದರ ನೋಟ ನೀಡುತ್ತದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿತ್ತು.

ಈ ಪೋಸ್ಟ್‌ ಹಾಕಿದ ಮೇಲೆ ಕೆಲವು ಪ್ರಸಾಧನ ಕಲಾವಿದರು ಇದೇ ಶೈಲಿಯನ್ನು ಅನುಕರಿಸಿ, ಬಣ್ಣ ಮತ್ತು ಚಿತ್ತಾರದಲ್ಲಿ ವಿಭಿನ್ನತೆಯನ್ನು ಸೃಷ್ಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.