ADVERTISEMENT

ಜಾಹೀರಾತಿನ ಮೋಡಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಜಾಹೀರಾತಿನ ಮೋಡಿ
ಜಾಹೀರಾತಿನ ಮೋಡಿ   

‘ನಿಮ್ಮ ನಾಲಗೆಯ ರುಚಿ ಈ ಬಾಟಲಿಯಲ್ಲಿ ಬಂಧಿಯಾಗಿದೆ’
ದಿಲೀಪ್‌ಕುಮಾರ್‌ ಟೇಬಲ್‌ ಟೇಸ್ಟೀಸ್‌
ಚಟ್ನಿ, ಉಪ್ಪಿನಕಾಯಿ, ಖಾರದಪುಡಿ ಇತ್ಯಾದಿ
ತಯಾರಕರು: ಮದರ್‌ ಇಂಡಿಯಾ ಪ್ರೊಡಕ್ಟ್ಸ್‌

ಗೊತ್ತೆ, ಕವಿ ರವೀಂದ್ರನಾಥ ಟ್ಯಾಗೋರ್‌ ಅವರೂ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದು? ನೀಳವಾಗಿ ಗಡ್ಡಬಿಟ್ಟ ಟ್ಯಾಗೋರ್‌ ಅವರ ಚಿತ್ರದ ಕೆಳಗಿನ ಸಾಲುಗಳು ಹೀಗಿದ್ದವು: ‘ಯಾವ ವಿದೇಶಿ ಸಾಬೂನೂ ಗೋದ್ರೇಜ್‌ನಷ್ಟು ಉತ್ತಮವಾಗಿಲ್ಲ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ. ಇದೇ ಸಾಬೂನಿನ ಬಳಕೆಗೆ ನಾನು ಸಲಹೆ ನೀಡುತ್ತೇನೆ’

ಗಬ್ಬರ್‌ ಕಿ ಅಸ್ಲಿ ಪಸಂದ್‌
ಗ್ಲುಕೋಸ್‌–ಡಿ ಬಿಸ್ಕೆಟ್‌
(ಶೋಲೆಯಲ್ಲಿ ಗಬ್ಬರ್‌ ಸಿಂಗ್‌ ಪಾತ್ರ ಮಾಡಿದ್ದ ಅಮ್ಜದ್‌ ಖಾನ್‌ ಕೈಯಲ್ಲಿ ಗ್ಲುಕೋಸ್‌–ಡಿ ಪ್ಯಾಕ್‌)

ADVERTISEMENT

ನೀರನ್ನು ಉಳಿಸಲು ನಾವು ಯಾವಾಗಲೂ ಜತೆಯಾಗಿ ಸ್ನಾನ ಮಾಡುತ್ತೇವೆ ಮತ್ತು ಬಾಂಬೆ ಡೈಯಿಂಗ್‌ ಟವೆಲ್‌ ಅನ್ನು ಕೂಡ ಜತೆಯಾಗಿಯೇ ಬಳಸುತ್ತೇವೆ
(ಒಂದೇ ಟವೆಲ್‌ ಅನ್ನು ಮೈಮೇಲೆ ಸುತ್ತಿಕೊಂಡ ಗಂಡು–ಹೆಣ್ಣಿನ ಜೋಡಿ)

ಚುಪಾ ಚುಪ್ಸ್‌: ಸಕ್ಕರೆರಹಿತ ಕ್ಯಾಂಡಿ
(ಕ್ಯಾಂಡಿ ಪಕ್ಕದಲ್ಲೇ ಇದ್ದರೂ ಇರುವೆಗಳ ಸಾಲು ಅದನ್ನು ಮುಟ್ಟದೆ ಬದಿಯಿಂದ ಹಾದು ಹೋಗುತ್ತಿರುವುದನ್ನು ನೋಡಿ...)

ವೊಡಾಫೋನ್‌ನ ‘ಜುಜು’ಗಳು
ಐಪಿಎಲ್‌ ಕ್ರಿಕೆಟ್‌ ಎರಡನೇ ಆವೃತ್ತಿಯಲ್ಲಿ ವೊಡಾಫೋನ್‌ ಪರಿಚಯಿಸಿದ ‘ಜುಜು’ ಜಾಹೀರಾತುಗಳು ದೇಶದ ಜನರನ್ನು ಸೂಜಿಗಲ್ಲಿನಂತೆ ಸೆಳೆದಿದ್ದವು. ಬಲೂನ್‌ನಂತೆ ಉಬ್ಬಿದ ಶರೀರ ಮತ್ತು ಮೊಟ್ಟೆಯಾಕಾರದ ಮುಖವನ್ನು ಹೊಂದಿದ್ದ ‘ಜುಜು’ಗಳು ಆನಿಮೇಷನ್‌ ರಚನೆಗಳಂತೆ ಕಂಡರೂ ಕಲಾವಿದರು ಆ ರೂಪದಲ್ಲಿ ಕಾಣಿಸಿಕೊಂಡಿದ್ದರು. ಬೆಂಗಳೂರು ಮೂಲದ ನಿರ್ವಾಣ್‌ ಫಿಲ್ಮ್ಸ್‌ ಸಂಸ್ಥೆ ಕೇಪ್‌ಟೌನ್‌ನಲ್ಲಿ ಈ ಜಾಹೀರಾತುಗಳನ್ನು ಚಿತ್ರೀಕರಿಸಿತ್ತು. ಈ ಜಾಹೀರಾತು ಸರಣಿಯ ಸೃಷ್ಟಿಗಾಗಿ ಸಂಸ್ಥೆ ₹3 ಕೋಟಿ ವ್ಯಯಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.