ADVERTISEMENT

ಟ್ರಾಫಿಕ್‌ ಸಿಗ್ನಲ್‌ನಲ್ಲೂ ಡುಯೆಟ್‌!

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 19:30 IST
Last Updated 15 ಡಿಸೆಂಬರ್ 2017, 19:30 IST
ಟ್ರಾಫಿಕ್‌ ಸಿಗ್ನಲ್‌ನಲ್ಲೂ ಡುಯೆಟ್‌!
ಟ್ರಾಫಿಕ್‌ ಸಿಗ್ನಲ್‌ನಲ್ಲೂ ಡುಯೆಟ್‌!   

ಟ್ರಾಫಿಕ್‌ ಸಿಗ್ನಲ್‌ನಲ್ಲಿ ಕಾಯುವುದಕ್ಕಿಂತ ದೊಡ್ಡ ಶಿಕ್ಷೆ ಇನ್ನೊಂದಿಲ್ಲಪ್ಪಾ ಎಂದು ನಮ್ಮ ನಿಮ್ಮಂತೆಯೇ ತೈವಾನ್‌ನಲ್ಲಿಯೂ ಜನ ಬೇಸರಿಸಿಕೊಂಡಿದ್ದಾರಂತೆ. ಅದಕ್ಕೆ ಅಲ್ಲಿನ ಸರ್ಕಾರ ಒಂದು ‘ಜನಪರ’ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಿದೆ.

‘ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಹೆಣ್ಣು ಮತ್ತು ಗಂಡು ಕೈಕೈ ಹಿಡಿದುಕೊಂಡು ಕುಣಿಯಬೇಕು, ವಾಹನಗಳು ನಿಂತಿರುವಷ್ಟು ಹೊತ್ತೂ ಏನಾದರೊಂದು ಕಸರತ್ತು ಮಾಡುವ ಮೂಲಕ ವಾಹನ ಸವಾರರ ಕಣ್ಮನ ತಣಿಸಬೇಕು’ ಎಂಬುದು ಈ ಹೊಸ ಯೋಜನೆಯ ಒಟ್ಟು ಸಾರಾಂಶ. ಆದರೆ ಈ ಹುಡುಗ ಹುಡುಗಿ ಡಿಜಿಟಲ್‌ ಆಕೃತಿಗಳಷ್ಟೇ. ಪ್ರಸ್ತುತ, ತೈವಾನ್‌ನ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಗಂಡಿನ ಡಿಜಿಟಲ್‌ ಚಿತ್ರ ಮಾತ್ರ ಇದೆ. ಹೊಸ ವರ್ಷದಲ್ಲಿ ಜಾರಿಗೆ ಬರುವ ಯೋಜನೆಯನ್ವಯ ಗಂಡು ಮತ್ತು ಹೆಣ್ಣಿನ ಚಿತ್ರ ಇರುತ್ತದೆ. ತಮಾಷೆಯೆಂದರೆ ಸಿಗ್ನಲ್‌ ದೀಪ ಹಸಿರು ಬಣ್ಣಕ್ಕೆ ತಿರುಗಿದಾಗ ಈ ಜೋಡಿ ಪರಸ್ಪರ ಕೈ ಹಿಡಿದುಕೊಂಡು ನಡೆದುಕೊಂಡು ಹೋಗುವಂತೆ, ಕೆಂಪು ಬಣ್ಣ ಬಂದಾಗ ಹುಡುಗ ಮಂಡಿ ಊರಿ ಕುಳಿತು, ಮತ್ತೊಂದು ಕೈಯಲ್ಲಿ ಹೂವಿನ ಗುಚ್ಛ ಹಿಡಿದು  ಹುಡುಗಿಗೆ ಪ್ರಪೋಸ್‌ ಕೂಡಾ ಮಾಡಲಿದ್ದಾನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT