ADVERTISEMENT

ವಾಂತಿ ಮಾಡಿ, ಮತ್ತೆ ಊಟ ತಿಂದು...

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST

ಅತಿಯಾಗಿ ಆಹಾರ ಸೇವಿಸಿ ಅರಗಿಸಿಕೊಳ್ಳಲು ಕಷ್ಟವಾದರೆ ಕೆಲವೊಮ್ಮೆ ವಾಂತಿಯಾಗುತ್ತದೆ. ಹೊಟ್ಟೆ ಕೆಟ್ಟಾಗಲೂ ವಾಂತಿಯಾಗುವುದು ಸಹಜ. ಆದರೆ ರೋಮನ್ನರು ವಾಂತಿ ಮಾಡುತ್ತಿದ್ದುದು ಮಾತ್ರ ವಿಚಿತ್ರ ಕಾರಣಕ್ಕೆ.

ಚೆನ್ನಾಗಿ ತಿಂದು ವಾಂತಿ ಮಾಡಿ, ಆ ಮೂಲಕ ಹೊಟ್ಟೆಯನ್ನು ಖಾಲಿ ಮಾಡಿಕೊಂಡು ಮತ್ತೆ ತಿನ್ನುವುದು ಇದರ ಹಿಂದಿನ ಉದ್ದೇಶವಂತೆ. ಅತಿಯಾಗಿ ತಿನ್ನುವುದನ್ನು ಕೆಲ ರೋಮನ್ನರು ರೂಢಿಸಿಕೊಂಡಿದ್ದರು. ಅದರಲ್ಲೂ ಸಭೆ ಸಮಾರಂಭಗಳು ನಡೆದರೆ ಮಿತಿ ಮೀರಿ ತಿನ್ನುತ್ತಿದ್ದರು. ಆಹಾರದೊಂದಿಗೆ ಮದ್ಯಸೇವನೆಯೂ ಇದ್ದೇ ಇರುತ್ತಿತ್ತು. ಆದರೆ ಕಂಠಮಟ್ಟದವರೆಗೆ ತಿಂದಾಕ್ಷಣ ಅದನ್ನು  ವಾಂತಿ ಮಾಡಿ ಮತ್ತೆ ಆಹಾರ ಸೇವನೆಗೆ ಹಿಂದಿರುಗುತ್ತಿದ್ದರಂತೆ.

ಇದಕ್ಕೆ ಸಾಕ್ಷ್ಯವೆಂಬಂತೆ ‘ವಾಮಿಟೋರಿಯಂ’ ಎಂಬ ವಿನ್ಯಾಸವೂ ರೋಮನ್ನರಲ್ಲಿ ಖ್ಯಾತಿಯಾಗಿತ್ತು. ಇನ್ನು ಹೆಚ್ಚು ತಿನ್ನಲು ಸಾಧ್ಯವೇ ಇಲ್ಲ ಎಂಬಷ್ಟು ತಿಂದು ಅದನ್ನು ವಾಂತಿ ಮಾಡಲು ಸುಲಭವಾಗಿ ಹೊರಗೆ ಹೋಗುವಂತೆ ವಾಮಿಟೋರಿಯಂ ನಿರ್ಮಿಸಲಾಗುತ್ತಿತ್ತು. ಅದಕ್ಕೆಂದೇ ವಿಶೇಷವಾಗಿ ಇಬ್ಬರು ಮೂವರು ಸೇವಕರನ್ನೇ ನೇಮಿಸಿಕೊಂಡಿರುತ್ತಿದ್ದರು ಎಂಬುದು ಇತಿಹಾಸದಲ್ಲಿನ ಒಂದು ವಾದ.

ಆದರೆ ಈ ಕುರಿತು ಇತಿಹಾಸಕಾರರಲ್ಲಿ ಸಾಕಷ್ಟು ಚರ್ಚೆ, ಭಿನ್ನಾಭಿಪ್ರಾಯಗಳೂ ವ್ಯಕ್ತವಾಗಿದ್ದವು. ವಾಮಿಟೋರಿಯಂ ಎಂಬುದು ರೋಮನ್ನರ ಕಟ್ಟಡ ವಿನ್ಯಾಸದ ಒಂದು ಪ್ರಕಾರವಷ್ಟೇ. ಎಂಥ ವ್ಯಕ್ತಿಯೂ ಮಿತಿ ಮೀರಿ ತಿಂದು ವಾಂತಿ ಮಾಡಿ ಮತ್ತೆ ತಿನ್ನಲು ಸಾಧ್ಯವೇ ಇಲ್ಲ, ಇವೆಲ್ಲ ಊಹೆಗಳು ಎಂಬ ಮರುವಾದವನ್ನೂ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT