ADVERTISEMENT

ಸ್ನೇಹಿತರೊಂದಿಗೆ ಲೈವ್ ವಿಡಿಯೊ ಮಾಡಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 19:30 IST
Last Updated 7 ನವೆಂಬರ್ 2017, 19:30 IST
ಸ್ನೇಹಿತರೊಂದಿಗೆ ಲೈವ್ ವಿಡಿಯೊ ಮಾಡಿ
ಸ್ನೇಹಿತರೊಂದಿಗೆ ಲೈವ್ ವಿಡಿಯೊ ಮಾಡಿ   

ಇನ್‌ಸ್ಟಾಗ್ರಾಂ ಲೈವ್ ಬ್ರಾಡ್‌ಕಾಸ್ಟಿಂಗ್‌ನಲ್ಲಿ ಹೊಸ ಆಯ್ಕೆ ಅಪ್‌ಡೇಟ್‌ ಆಗಿದೆ. ಈ ಆಯ್ಕೆಯಲ್ಲಿ ಸ್ನೇಹಿತರೊಂದಿಗೆ ಲೈವ್ ವಿಡಿಯೊ ಮಾಡಬಹುದು. ಬ್ರಾಡ್ ಕಾಸ್ಟಿಂಗ್‌ ಲೈವ್ ಮಾಡುವಾಗ ಸ್ನೇಹಿತರನ್ನು ಆಹ್ವಾನಿಸಬೇಕು. ಅದಕ್ಕಾಗಿಯೇ ಆ್ಯಡ್ ಬಟನ್ ಅನ್ನು ನೀಡಲಾಗಿದೆ. ಇನ್ನೊಬ್ಬರು ಸ್ನೇಹಿತರು ನಮ್ಮ ಸ್ಕ್ರಿನ್‌ಗೆ ಸೇರಿಕೊಂಡ ನಂತರದಲ್ಲಿ ಸ್ಕ್ರಿನ್ ಎರಡು ಭಾಗವಾಗಲಿದೆ. ಇದು ಡಬ್‌ಸ್ಮಾಶ್‌ ರೀತಿಯ ವಿಡಿಯೊ ಆಗುತ್ತದೆ.

ಈ ಬ್ರಾಡ್‌ಕಾಸ್ಟ್‌ ಮಾಡುವಾಗ ಸ್ನೇಹಿತರನ್ನು ಲೈವ್ ಮಧ್ಯದಿಂದ ತೆಗೆದು ಹಾಕಬಹುದು, ಅಥವಾ ಅವರೇ ಲೈವ್‌ನಿಂದ ಹೊರಹೋಗಬಹುದು. ಈ ವಿಡಿಯೊ ಲೈವ್‌ ಆದ ನಂತರ ಒಂದು ಕಾಪಿಯನ್ನು ಮೊಬೈಲ್‌ಗೆ ಸೇವ್‌ ಮಾಡಿಕೊಳ್ಳಬಹುದು. ನಂತರ ಬೇರೆ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳಲು ಬಳಸಬಹುದು.

ಬ್ರಾಡ್‌ಕಾಸ್ಟ್‌ ಲೈವ್‌ ಹೋಗುವ ಸಂದರ್ಭದಲ್ಲಿ ನೋಡುಗರು ಪ್ರತಿಕ್ರಿಯಿಸಿದರೆ, ಅದಕ್ಕೆ ಉತ್ತರವ‌ನ್ನು ಲೈವ್‌ ಹೋಗುವುವಾಗಲೇ ಬರೆಯಬಹುದು. ಇನ್‌ಸ್ಟಾಗ್ರಾಂನ ಲೈವ್‌ಬ್ರಾಡ್‌ಕಾಸ್ಟ್‌ ಆಯ್ಕೆ ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ.

ADVERTISEMENT

ಈ ಹೊಸ ಅಪ್‌ಡೇಟ್‌ ಮತ್ತಷ್ಟು ಸಾಧ್ಯತೆಗಳನ್ನು ತೆರೆಯಲಿದೆ. ಈ ಹೊಸ ಆಯ್ಕೆಯನ್ನು ಆಂಡ್ರಾಯ್ಡ್ ಮತ್ತು ಐಎಸ್ಒ ಎರಡೂ ಬಳಕೆದಾರರಿಗೆ ಮುಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.