ADVERTISEMENT

ಧೂಮ ಸೇವಿಸುವ ಆಚರಣೆ

ಹೀಗೂ ಉಂಟು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST

‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಮಾತು ಹೆಚ್ಚು ಪ್ರಚಲಿತ. ಆದರೆ ಆಸ್ಟ್ರೇಲಿಯಾದ ಬುಡಕಟ್ಟು ಜನಾಂಗವೊಂದು ಧೂಮ ಸೇವಿಸುವ ಆಚರಣೆಯನ್ನೇ ನಡೆಸುತ್ತದೆ. ಹಾಗೆಂದು ಇದನ್ನು ಸಿಗರೇಟ್ ಸೇದುವುದು ಎಂದು ಭಾವಿಸಬೇಕಿಲ್ಲ.

ಸ್ಥಳೀಯ ಗಿಡಮೂಲಿಕೆಗಳನ್ನು ಒಟ್ಟುಗೂಡಿಸಿ ಸುಟ್ಟು, ಅದರ ಹೊಗೆ ಸೇವಿಸುವುದು ಈ ಆಚರಣೆಯ ಮೂಲ. ಹೀಗೆ ಸುಡುವ ಸಸ್ಯಗಳಲ್ಲಿ ಔಷಧೀಯ ಅಂಶಗಳಿದ್ದು, ದೇಹ ಶುದ್ಧಿಗೊಳಿಸುವ ಪ್ರಕ್ರಿಯೆ ನಡೆಯುತ್ತದೆಯಂತೆ. ಈ ಹೊಗೆಯಿಂದ ದುಷ್ಟಶಕ್ತಿಗಳು ದೂರ ಉಳಿಯುತ್ತವೆ ಎಂಬ ನಂಬಿಕೆಯೂ ತಳುಕು ಹಾಕಿಕೊಂಡಿದೆ.

ಧಾರ್ಮಿಕತೆಯೊಂದಿಗೆ ಆರೋಗ್ಯಪೂರಕ ಆಯಾಮವೂ ಇದಕ್ಕಿದೆ. ಈ ಆಚರಣೆಗೆ ಸಂಬಂಧಿಸಿದಂತೆ ಯುನಿವರ್ಸಿಟಿ ಆಫ್ ನ್ಯೂ ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ಸಂಶೋಧನೆಯೂ ನಡೆದಿದೆ. ಸಮಾರಂಭಗಳಲ್ಲಿ, ಜನನ ಹಾಗೂ ಮರಣ ಸಂಭವಿಸಿದಾಗ ಈ ಆಚರಣೆ ನಡೆಯುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.