ADVERTISEMENT

ಆಟಕ್ಕೆ ಮರಳುವ ವಿಶ್ವಾಸದಲ್ಲಿ ಕ್ವಿಟೋವಾ

ಪಿಟಿಐ
Published 22 ಮಾರ್ಚ್ 2017, 19:04 IST
Last Updated 22 ಮಾರ್ಚ್ 2017, 19:04 IST
ಆಟಕ್ಕೆ ಮರಳುವ ವಿಶ್ವಾಸದಲ್ಲಿ ಕ್ವಿಟೋವಾ
ಆಟಕ್ಕೆ ಮರಳುವ ವಿಶ್ವಾಸದಲ್ಲಿ ಕ್ವಿಟೋವಾ   

ಪ್ರೊಸ್ತೆಜೆವ್‌, ಚೆಕ್‌ ಗಣರಾಜ್ಯ (ಐಎಎನ್‌ಎಸ್‌): ದುಷ್ಕರ್ಮಿಯೊಬ್ಬ ಚೂರಿಯಿಂದ ಇರಿದಿದ್ದರಿಂದ ಗಾಯ ಗೊಂಡಿದ್ದ ಚೆಕ್‌ ಗಣರಾಜ್ಯದ ಟೆನಿಸ್‌ ಆಟಗಾರ್ತಿ ಪೆಟ್ರಾ ಕ್ವಿಟೋವಾ ಚೇತರಿಸಿಕೊಳ್ಳುತ್ತಿದ್ದಾರೆ.

ಹೋದ ಡಿಸೆಂಬರ್‌ 20ರಂದು ಕ್ವಿಟೋವಾ ಅವರಿದ್ದ ಫ್ಲ್ಯಾಟ್‌ಗೆ ನುಗ್ಗಿದ್ದ ದುಷ್ಕರ್ಮಿ, ಅವರ ಮೇಲೆ ಹಲ್ಲೆ ನಡೆಸಿದ್ದ. ಆಗ ಅವರ ಎಡಗೈಗೆ ತೀವ್ರ ಗಾಯವಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.

ಎರಡು ಬಾರಿ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆಗಿರುವ ಕ್ವಿಟೋವಾ ಅವರು ಗಾಯದಿಂದ ಚೇತರಿಸಿಕೊಂಡ ಬಳಿಕ ಮೊದಲ ಬಾರಿಗೆ ತಮ್ಮ ಫೇಸ್‌
ಬುಕ್ ಪುಟದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ADVERTISEMENT

‘ಹೆಲೋ ಗೆಳೆಯರೇ! ಈ ಆಘಾತದಿಂದ ಹೊರಬರಲು ನನಗೆ ಮೂರು ತಿಂಗಳು ಬೇಕಾಯಿತು. ಗಾಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಸದ್ಯದಲ್ಲೇ  ಅಂಕಣಕ್ಕೆ ಕಾಲಿಡುವ ವಿಶ್ವಾಸ ಇದೆ. ಆದರೆ ಈ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಕಠಿಣ ಅಭ್ಯಾಸದ ಬಳಿಕ ಮರಳುವ ಉದ್ದೇಶ ಇದೆ’ ಎಂದು ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.