ADVERTISEMENT

ಕ್ವಾರ್ಟರ್‌ಫೈನಲ್‌ಗೆ ಜೋಷ್ನಾ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST
ಜೋಷ್ನಾ ಚಿಣ್ಣಪ್ಪ
ಜೋಷ್ನಾ ಚಿಣ್ಣಪ್ಪ   

ಮುಂಬೈ (ಪಿಟಿಐ): ಭಾರತದ ಜೋಷ್ನಾ ಚಿಣ್ಣಪ್ಪ ಮತ್ತು ಹರಿಂದರ್‌ ಪಾಲ್‌ ಸಂಧು ಇಲ್ಲಿ ನಡೆಯುತ್ತಿರುವ ಜೆಎಸ್‌ಡಬ್ಲ್ಯು ಸ್ಕ್ವಾಷ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಜೋಷ್ನಾ 11–9, 11–4, 11–3ರಲ್ಲಿ ಬ್ರಿಟನ್‌ನ ಸಿನಾ ವಾಲ್‌ ಅವರನ್ನು ಮಣಿಸಿದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಮೂರನೇ ಶ್ರೇಯಾಂಕದ ಸಂಧು 11–2, 11–9, 7–11, 6–11, 11–7ರಲ್ಲಿ ಇಂಗ್ಲೆಂಡ್‌ನ ಜೋ ಹಿಂದ್ಸ್‌ ಎದುರು ಗೆದ್ದರು.

ವಿಶ್ವದ 56ನೇ ರ್‍ಯಾಂಕಿಂಗ್‌ನ ಭಾರತದ ಆಟಗಾರ ಹಿಂದ್ಸ್ ಎದುರು ಪ್ರಯಾಸದ ಗೆಲುವು ಪಡೆದಿದ್ದಾರೆ.
ಸಚಿಕಾ ಇಂಗ್ಲೆಗೆ ಸೋಲು: ಭಾರತದ ಸಚಿಕಾ 11–8, 1–11, 2–11, 2–11ರಲ್ಲಿ  ಈಜಿಪ್ಟ್‌ನ ನೂರಲ್‌ ಎದುರು ಸೋಲು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.