ADVERTISEMENT

ಟಿಟಿ: ಅರ್ಚನಾ ಕಾಮತ್‌ಗೆ ಸೋಲು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:45 IST
Last Updated 17 ಫೆಬ್ರುವರಿ 2017, 19:45 IST
ಕರ್ನಾಟಕದ ಅರ್ಚನಾ ಕಾಮತ್‌
ಕರ್ನಾಟಕದ ಅರ್ಚನಾ ಕಾಮತ್‌   

ನವದೆಹಲಿ: ಒಲಿಂಪಿಯನ್ ಅಚಂತ ಶರತ್ ಕಮಲ್ ಅವರು ಇಲ್ಲಿ ನಡೆ ಯುತ್ತಿರುವ ಐಟಿಟಿಎಫ್ ವಿಶ್ವ ಟೂರ್ ಇಂಡಿಯಾ ಓಪನ್ ಟೇಬಲ್ ಟೆನಿಸ್ ಟೂರ್ನಿಯ ಪುರುಷರ  ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.  ಆದರೆ ಕರ್ನಾಟಕದ   ಉದಯೋನ್ಮುಖ ಆಟಗಾರ್ತಿ ಅರ್ಚನಾ ಕಾಮತ್  ಮಹಿಳಾ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.

ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ  ನಡೆದ ಪುರುಷರ ಸಿಂಗಲ್ಸ್‌ನ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ  ಕಮಲ್ 11–8, 11–7, 11–4, 14–16, 11–5 ಗೇಮ್‌ಗಳಿಂದ ಜಪಾನ್‌ ದೇಶದ ಯುಟೊ ಮುರಾಮುತ್ಸು ವಿರುದ್ಧ ಗೆದ್ದರು.

ಸಿಂಗಲ್ಸ್‌ನ 32ರ ಘಟ್ಟದಲ್ಲಿ ಬೆಂಗಳೂರಿನ ಅರ್ಚನಾ ಕಾಮತ್ 4–2ರಿಂದ ಭಾರತದ    ಐಹಿಕಾ ಮುಖರ್ಜಿ ವಿರುದ್ಧ ಜಯಿಸಿದರು.  ಆದರೆ 16ರ ಘಟ್ಟದ ಪಂದ್ಯದಲ್ಲಿ ಜಪಾನ್‌ನ ಸಕುರಾ ಮೊರಿ 11–3, 13–11, 5–11, 11–4, 10–12, 11–4ರಲ್ಲಿ ಅರ್ಚನಾ ಎದುರು ಗೆಲುವು ಸಾಧಿಸಿದರು.
ಸನಿಲ್ ಶೆಟ್ಟಿ 2–4ರಿಂದ ಆಸ್ಟ್ರೀಯಾದ ರಾಬರ್ಟ್ ಗಾರ್ಡೊಸ್ ವಿರುದ್ಧ ಸೋತರು. ಜರ್ಮನಿಯ   ಡಿಮಿತ್ರಿ ಓಚ್ರೋವ್ ಅವರು 4–2ರಿಂದ ಹರ್ಮೀತ್ ದೇಸಾಯಿ ಅವರನ್ನು ಮಣಿಸಿ ಎಂಟರ ಘಟ್ಟಕ್ಕೆ ಲಗ್ಗೆ ಹಾಕಿದರು.

ADVERTISEMENT

ಕೈಫ್‌  ಕೋಚ್‌
ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್‌ ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಗುಜರಾತ್ ಲಯನ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.  ಏಪ್ರಿಲ್ 5 ರಿಂದ ಐಪಿಎಲ್‌  ಆರಂಭವಾಗಲಿವೆ.
ಜವಾಬ್ದಾರಿ:  ಜಮ್ಮು ಮತ್ತು ಕಾಶ್ಮೀರದ  ಮಿಥುನ್ ಮನ್ಹಾಸ್  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಮಿಥುನ್ ರಣಜಿ ಟ್ರೋಫಿಯಲ್ಲಿ ದೆಹಲಿ ತಂಡದ ಪರ ಆಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡಗ ಳನ್ನೂ ಪ್ರತಿನಿಧಿಸಿದ್ದಾರೆ.

ವೇವ್‌ರೈಡರ್ಸ್‌ಗೆ ಜಯ
ಚಂಡಿಗಡ (ಪಿಟಿಐ): ಡೆಲ್ಲಿ ವೇವ್‌ರೈಡರ್ಸ್ ತಂಡವು ಇಲ್ಲಿ ನಡೆಯು ತ್ತಿರುವ ಹಾಕಿ ಇಂಡಿಯಾ ಲೀಗ್ ಟೂರ್ನಿ ಯಲ್ಲಿ ಶುಕ್ರವಾರ  ಜೇಪಿ ಪಂಜಾಬ್ ವಾರಿಯರ್ಸ್ ವಿರುದ್ಧ ಜಯಿಸಿತು.
ಡೆಲ್ಲಿ ತಂಡವು 6–1 ಗೋಲುಗಳಿಂದ ವಾರಿಯರ್ಸ್‌ ತಂಡವನ್ನು ಮಣಿಸಿತು. ತಂಡದ ಜಸ್ಟಿನ್ ರೀಡ್ ರಾಸ್ (4ನೇ ನಿ), ನಾಯಕ ರೂಪಿಂದರ್ ಪಾಲ್ ಸಿಂಗ್ (17ನೇ ನಿ) ಅವರು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಾಗಿ ಪರಿವರ್ತಿಸಿದರು.  ನಂತರ ಮನದೀಪ್ ಸಿಂಗ್ (38ನೇ ನಿ) ಫೀಲ್ಡ್‌ ಗೋಲ್ ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.