ADVERTISEMENT

ಟೆನಿಸ್: ಕ್ವಾರ್ಟರ್‌ಗೆ ಪೇಸ್ ಜೋಡಿ

ಪಿಟಿಐ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST

ಇಲಿಕ್ಲಿ, ಬ್ರಿಟನ್‌: ಅಗ್ರ ಶ್ರೇಯಾಂಕದ ಭಾರತದ ಲಿಯಾಂಡರ್‌ ಪೇಸ್ ಹಾಗೂ ಕೆನಡಾದ ಆದಿಲ್‌ ಶಮಸ್‌ಡಿನ್ ಜೋಡಿ ಇಲ್ಲಿ ನಡೆಯುತ್ತಿರುವ ಏಗನ್ ಎಟಿಪಿ ಚಾಲೆಂಜರ್‌ ಟೆನಿಸ್ ಟೂರ್ನಿಯಲ್ಲಿ ಬುಧವಾರ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದೆ.

ಭಾರತ ಮತ್ತು ಕೆನಡಾ ಜೋಡಿ ಪುರುಷರ ಡಬಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ 4–6, 6–3, 12–10ರಲ್ಲಿ ಆಸ್ಟ್ರೇಲಿಯಾದ ಮ್ಯಾಡ್‌ ರಿಡ್‌ ಮತ್ತು ಜಾನ್‌ ಪ್ಯಾಟ್ರಿಕ್ ಸ್ಮಿತ್‌ ಅವರನ್ನು ಮಣಿಸಿತು.

ಮುಂದಿನ ಪಂದ್ಯದಲ್ಲಿ ಪೇಸ್ ಜೋಡಿ ಬೆಲಾರಸ್‌ನ ಆಂಡ್ರಿ ವಸಿಲ್‌ವಸ್ಕಿ ಮತ್ತು ಚಿಲಿಯ ಹನ್ಸ್‌ ಕ್ಯಾಸ್ಟಿಲೊ ಅವರೊಂದಿಗೆ ಆಡಲಿದೆ.

ADVERTISEMENT

ಎರಡನೇ ಶ್ರೇಯಾಂಕದ ಭಾರತದ ಇನ್ನೊಂದು ಜೋಡಿ ಪೂರವ್‌ ರಾಜಾ ಮತ್ತು ದಿವಿಜ್ ಶರಣ್‌  6–2, 6–4ರಲ್ಲಿ ವಿಕ್ಟರ್‌ ಎಸ್ಟ್ರೆಲಾಮತ್ತು ಡೆರಿಯನ್ ಕಿಂಗ್ ವಿರುದ್ಧ ಗೆಲುವು ದಾಖಲಿಸಿತು.

ದಿವಿಜ್ ಮತ್ತು ಪೂರವ್ ಕ್ವಾರ್ಟರ್‌ನಲ್ಲಿ ಥಾಯ್ಲೆಂಡ್‌ನ ಸಂಚೈ ಮತ್ತು ಸಂಚತ್ ಎದುರು ಆಡಲಿದ್ದಾರೆ.

ಲಂಡನ್‌ನಲ್ಲಿ ನಡೆದ ಏಗನ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಇವಾನ್ ದೊಡಿಗ್ ಜೋಡಿ 6–3, 6–7, 10–7ರಲ್ಲಿ ಕೆಲೆ ಎಡ್ಮಂಡ್ ಮತ್ತು ತಾನಸಿ ಕೊಕೊನಕಿನ್ಸ್ ವಿರುದ್ಧ ಗೆಲುವು ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.