ADVERTISEMENT

ಬ್ಯಾಸ್ಕೆಟ್‌ಬಾಲ್‌: ಜೈನ್‌ ವಿವಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ಬೆಂಗಳೂರು: ಜೈನ್‌ ವಿಶ್ವ ವಿದ್ಯಾ ನಿಲಯದ ಮಹಿಳಾ ತಂಡದವರು  ತಮಿಳುನಾಡಿನ ವೆಲ್ಲೂರಿನ ಕ್ರಿಸ್ಚಿ ಯನ್‌ ವೈದ್ಯಕೀಯ ಕಾಲೇಜಿನ  ಆಶ್ರಯದಲ್ಲಿ ನಡೆದ  ಅಖಿಲ ಭಾರತ  ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಟೂರ್ನಿ ಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಫೈನಲ್‌ ನಲ್ಲಿ ಜೈನ್‌ ವಿಶ್ವವಿದ್ಯಾ ನಿಲಯ ತಂಡದ ಆಟಗಾರ್ತಿಯರು      62–47 ರಲ್ಲಿ ಚೆನ್ನೈನ ಎಂ.ಒ.ಪಿ ವೈಷ್ಣವ್‌ ಕಾಲೇಜು ತಂಡವನ್ನು ನಿರಾಯಾಸ ವಾಗಿ ಸೋಲಿಸಿದರು.  ಜೈನ್‌ ವಿವಿಯ ಮಥುರವಾಣಿ 22ಪಾಯಿಂಟ್ಸ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.