ADVERTISEMENT

ಬ್ಯಾಸ್ಕೆಟ್‌ ಬಾಲ್: ನಿಲುವು ಸ್ಪಷ್ಟಪಡಿಸಲು ತಾಕೀತು

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:50 IST
Last Updated 20 ಜುಲೈ 2017, 19:50 IST

ಬೆಂಗಳೂರು: ‘ರಾಷ್ಟ್ರೀಯ ಬ್ಯಾಸ್ಕೆಟ್‌ ಬಾಲ್ ಫೆಡರೇಷನ್ ಆಫ್ ಇಂಡಿಯಾಗೆ ಮಾನ್ಯತೆ ನೀಡುವ ಕುರಿತು ಕ್ರೀಡಾ ಇಲಾಖೆ ತನ್ನ ನಿಲುವು ಸ್ಪಷ್ಟ
ಪಡಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ.

ರಾಷ್ಟ್ರೀಯ ಬ್ಯಾಸ್ಕೆಟ್‌ ಬಾಲ್ ಫೆಡರೇಷನ್ ಆಫ್ ಇಂಡಿಯಾ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು  ನ್ಯಾಯಮೂರ್ತಿಗಳಾದ ಜಯಂತ್ ಪಟೇಲ್ ಹಾಗೂ ಎಸ್‌.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿದೆ.

‘ಒಂದು ವೇಳೆ ಮಾನ್ಯತೆ ನೀಡದಿದ್ದರೆ, ಜುಲೈ 23ರಿಂದ ನಗರದಲ್ಲಿ ನಡೆಯಲಿರುವ ಏಷ್ಯನ್ ಬ್ಯಾಸ್ಕೆಟ್‌ ಬಾಲ್ ಚಾಂಪಿಯನ್‌ಷಿಪ್‌ ಕ್ರೀಡೆಗೆ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದೂ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಮೌಖಿಕವಾಗಿ ತಾಕೀತು ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.