ADVERTISEMENT

ಬ್ಯಾಡ್ಮಿಂಟನ್‌: ನಿಕೋಲಸ್‌, ತುಷಾರ್‌ ಜೋಡಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 22:53 IST
Last Updated 23 ಏಪ್ರಿಲ್ 2024, 22:53 IST
<div class="paragraphs"><p>ಅಖಿಲ ಭಾರತ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದವರು (ನಿಂತವರು ಎಡದಿಂದ) ಕರ್ನಾಟಕದ ತುಷಾರ್ ಸುವೀರ್, ನಿಕೋಲಸ್ ನಾಥನ್ ರಾಜ್, ಆಂಧ್ರಪ್ರದೇಶದ ಭಾರ್ಗವ್ ರಾಮ್, ತೆಲಂಗಾಣದ ವೆನ್ನಲಾ ಕೆ, (ಕುಳಿತವರು ಎಡದಿಂದ) ತಮಿಳುನಾಡಿನ ರೇಷಿಕಾ ಯು, ಆಂಧ್ರಪ್ರದೇಶದ ನವ್ಯಾ ಕಂಡೇರಿ, ಮಹಾರಾಷ್ಟ್ರದ ಆಲಿಶಾ ನಾಯ್ಕ್‌ </p></div>

ಅಖಿಲ ಭಾರತ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದವರು (ನಿಂತವರು ಎಡದಿಂದ) ಕರ್ನಾಟಕದ ತುಷಾರ್ ಸುವೀರ್, ನಿಕೋಲಸ್ ನಾಥನ್ ರಾಜ್, ಆಂಧ್ರಪ್ರದೇಶದ ಭಾರ್ಗವ್ ರಾಮ್, ತೆಲಂಗಾಣದ ವೆನ್ನಲಾ ಕೆ, (ಕುಳಿತವರು ಎಡದಿಂದ) ತಮಿಳುನಾಡಿನ ರೇಷಿಕಾ ಯು, ಆಂಧ್ರಪ್ರದೇಶದ ನವ್ಯಾ ಕಂಡೇರಿ, ಮಹಾರಾಷ್ಟ್ರದ ಆಲಿಶಾ ನಾಯ್ಕ್‌

   

–ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್‌

ಬೆಂಗಳೂರು: ಮಹಾರಾಷ್ಟ್ರದ ಪ್ರಣಯ್ ಶೆಟ್ಟಿಗಾರ್ ಅವರು ಇಲ್ಲಿ ನಡೆದ ಅಖಿಲ ಭಾರತ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 19 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ ಪ್ರಶಸ್ತಿಯನ್ನು ಮುಡಿಗೇರಿಕೊಂಡರು. ಬಾಲಕಿಯರ ಸಿಂಗಲ್ಸ್‌ ಕಿರೀಟ ಅದೇ ರಾಜ್ಯದ ಆಲಿಶಾ ನಾಯ್ಕ್ ಪಾಲಾಯಿತು.

ADVERTISEMENT

ಸೋಮವಾರ ನಡೆದ ಬಾಲಕರ ಫೈನಲ್‌ ಹಣಾಹಣಿಯಲ್ಲಿ ಆರನೇ ಶ್ರೇಯಾಂಕದ ಪ್ರಣಯ್‌ 21-13, 18-21, 21-18 ರಿಂದ ಚಂಡೀಗಢದ ರೌನಕ್ ಚೌಹಾಣ್ ಅವರನ್ನು ಮಣಿಸಿದರು. ಬಾಲಕಿಯರ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಲೀಶಾ ಅವರು 21-9, 21-15ರಿಂದ ಐದನೇ ಶ್ರೇಯಾಂಕದ ಮುಸ್ಕಾನ್ ಖಾನ್ ಅವರಿಗೆ ಆಘಾತ ನೀಡಿದರು.

ಬಾಲಕರ ಡಬಲ್ಸ್‌ನಲ್ಲಿ ಸ್ಥಳೀಯ ಆಟಗಾರರಾದ ನಿಕೋಲಸ್ ನಾಥನ್ ರಾಜ್ ಮತ್ತು ತುಷಾರ್ ಸುವೀರ್ 21-19, 21-17ರಿಂದ ಮೂರನೇ ಶ್ರೇಯಾಂಕದ ಭವ್ಯಾ ಛಾಬ್ರಾ ಮತ್ತು ಪರಮ್ ಚೌಧರಿ (ದೆಹಲಿ) ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು.

ಬಾಲಕಿಯರ ಡಬಲ್ಸ್‌ ಫೈನಲ್‌ನಲ್ಲಿ ನವ್ಯಾ ಕಂಡೇರಿ (ಆಂಧ್ರ) ಮತ್ತು ರೇಷಿಕಾ ಯು. (ತಮಿಳುನಾಡು) ಜೋಡಿಯು 21-16, 22-20 ಅಂತರದಲ್ಲಿ ಅನ್ಯಾ ಬಿಶ್ತ್ ಮತ್ತು ಏಂಜೆಲ್ ಪುಣೆರಾ (ಉತ್ತರಖಂಡ) ವಿರುದ್ಧ ಜಯ ಸಾಧಿಸಿತು.

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಭಾರ್ಗವ್ ರಾಮ್ (ಆಂಧ್ರ) ಮತ್ತು ವೆನ್ನಲಾ ಕೆ. (ತೆಲಂಗಾಣ) ಜೋಡಿಯು 21-19, 21-13 ರಿಂದ ಭವ್ಯಾ ಛಾಬ್ರಾ (ದೆಹಲಿ) ಮತ್ತು ಪ್ರಜ್ಞಾ ಕತಾರಾ (ರಾಜಸ್ಥಾನ) ವಿರುದ್ಧ ಗೆದ್ದು ಚಾಂಪಿಯನ್‌ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.