ADVERTISEMENT

ಶುಚಿಯಾಗಿರಲಿ ಡ್ರೈವ್‌

ದಯಾನಂದ ಎಚ್‌.ಎಚ್‌.
Published 23 ಆಗಸ್ಟ್ 2017, 19:30 IST
Last Updated 23 ಆಗಸ್ಟ್ 2017, 19:30 IST
ಶುಚಿಯಾಗಿರಲಿ ಡ್ರೈವ್‌
ಶುಚಿಯಾಗಿರಲಿ ಡ್ರೈವ್‌   

ಗ್ಯಾಜೆಟ್‌ಗಳ ಬಳಕೆ ಹೆಚ್ಚಾದಂತೆ ಡೇಟಾ ಉಳಿಸಿಕೊಳ್ಳುವ ತಾಣಗಳೂ ಹೆಚ್ಚಾಗುತ್ತಿವೆ. ಸ್ಮಾರ್ಟ್‌ ಫೋನ್‌, ಟ್ಯಾಬ್‌ ಇಲ್ಲವೇ ಕಂಪ್ಯೂಟರ್‌ ನಲ್ಲಿರುವ ಡೇಟಾ ಅನ್ನು ಈಗ ಡ್ರೈವ್‌ ನಲ್ಲಿ ಸೇವ್‌ ಮಾಡುವ ರೂಢಿ ಹೆಚ್ಚಾಗಿದೆ. ಬ್ಯಾಕ್ ಅಪ್‌ ವಿಷಯಕ್ಕೆ ಬಂದಾಗ ಕ್ಲೌಡ್‌ ಗೆ ಆಟೊ ಸೇವ್‌ ಮಾಡಿಕೊಳ್ಳುವವರೇ ಹೆಚ್ಚು. ಆದರೆ, ಬೇಕಿರುವುದು, ಬೇಕಿಲ್ಲದ್ದು ಎಲ್ಲವೂ ತುಂಬಿಕೊಂಡು ಡ್ರೈವ್‌ ಎಂಬುದು ಕಸದ ರಾಶಿಯಾಗುವುದೂ ಇದೆ.

ಮೆಮೊರಿಯ ಮಾತು ಒತ್ತಟ್ಟಿಗಿರಲಿ, ಡೇಟಾ ರಾಶಿಯ ನಡುವೆ ನಮಗೆ ಬೇಕಾದ ಡೇಟಾ ಹುಡುಕುವುದೂ ಕೆಲವೊಮ್ಮೆ ದೊಡ್ಡ ಹಿಂಸೆಯಾಗಬಹುದು. ಸ್ಮಾರ್ಟ್‌ ಫೋನ್‌ ನಲ್ಲಿ ಕ್ಲಿಕ್ಕಿಸಿದ ಫೋಟೊಗಳನ್ನು ರಿನೇಮ್‌ ಮಾಡಿ ಡ್ರೈವ್‌ ಗೆ ಸೇವ್‌ ಮಾಡುವ ಅಭ್ಯಾಸ ಕೆಲವರದ್ದು ಮಾತ್ರ. ಬಹುತೇಕರು ಆಟೊ ಸಿಂಕ್‌ ಎನೆಬಲ್‌ ಮಾಡುವುದು ಈಗ ಸಾಮಾನ್ಯವಾಗಿರುವುದರಿಂದ ಕ್ಲಿಕ್ಕಿಸಿದ ಎಲ್ಲಾ ಫೋಟೊ, ವಿಡಿಯೊಗಳೂ ಡ್ರೈವ್‌ ತುಂಬಿಕೊಂಡಿರುತ್ತವೆ.

ಆಟೊ ಬ್ಯಾಕ್‌ ಅಪ್‌ ಮೂಲಕ ಡಿವೈಸ್‌ ನ ಎಲ್ಲವೂ ಡ್ರೈವ್‌ ಗೆ ತುಂಬಿಕೊಂಡಿರುತ್ತವೆ. ಹೀಗೆ ಡ್ರೈವ್‌ ತುಂಬಿರುವ ಕಸವನ್ನು ಗುಡಿಸಿಹಾಕುವುದು ದೊಡ್ಡ ತಲೆನೋವಿನ ಕೆಲಸ. ಅಪ್‌ ಲೋಡ್‌ ಆಗಿರುವ ಎಲ್ಲಾ ಫೈಲ್‌ ಗಳನ್ನು ತೆರೆದು ನೋಡಿ, ಬೇಕಿರುವುದನ್ನು ಉಳಿಸಿಕೊಂಡು ಬೇಡವಾದ್ದನ್ನು ಡಿಲೀಟ್‌ ಮಾಡಲು ಸಾಕಷ್ಟು ಸಮಯವೂ ಬೇಕು. ಹೀಗಾಗಿ ಡ್ರೈವ್‌ ಗೆ ಸೇವ್‌ ಮಾಡುವ ಮುನ್ನಾ ಯಾವ ಫೈಲ್‌ ಮುಖ್ಯವೋ ಅಂಥವನ್ನು ಮಾತ್ರ ಸೇವ್‌ ಮಾಡಿ.

ADVERTISEMENT

ಅನಗತ್ಯವಾಗಿ ಎಲ್ಲಾ ಫೈಲ್‌ ಗಳನ್ನೂ ಡ್ರೈವ್‌ ಗೆ ತಳ್ಳಿ ಡಿವೈಸ್‌ ಮೆಮೊರಿ ಉಳಿಸಿಕೊಂಡ ನೆಮ್ಮದಿಯಲ್ಲಿ ಸುಮ್ಮನಿರುವುದಕ್ಕಿಂತ ಕಾಲಕಾಲಕ್ಕೆ ಡ್ರೈವ್‌ ಕ್ಲೀನ್‌ ಮಾಡುವ, ಇಲ್ಲವೇ ಅತಿ ಮುಖ್ಯ ಫೈಲ್‌ಗಳನ್ನು ಮಾತ್ರ ಡ್ರೈವ್‌ಗೆ ಸೇವ್‌ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಡ್ರೈವ್‌ ನಲ್ಲಿ ಕಸ ಹೆಚ್ಚಾದಷ್ಟೂ ಮುಂದೆ ನೀವು ಹುಡುಕುವ ಫೈಲ್‌ ಅನ್ನು ಕಸದ ರಾಶಿಯಲ್ಲಿ ಹುಡುಕಿದಂತೆಯೇ ಹುಡುಕಬೇಕಾಗಬಹುದು.

ಡಿವೈಸ್‌ ಗಳಲ್ಲಿ ಕ್ಲಿಕ್ಕಿಸಿದ ಫೋಟೊ, ಸೆರೆಹಿಡಿದ ವಿಡಿಯೊ, ಸೇವ್‌ ಮಾಡಿಕೊಂಡ ಫೈಲ್‌ ಗಳ ಪೈಕಿ ಅತಿ ಮುಖ್ಯವಾದ ಫೈಲ್‌ ಗಳನ್ನು ಮಾತ್ರ ಉಳಿಸಿಕೊಂಡು ಉಳಿದವನ್ನು ಡಿಲೀಟ್‌ ಮಾಡಿ. ಈ ಮುಖ್ಯವಾದ ಫೈಲ್‌ ಗಳನ್ನು ರಿನೇಮ್‌ ಮಾಡಿ, ಅವನ್ನು ಡ್ರೈವ್‌ ಗೆ ಸೇವ್‌ ಮಾಡಿ. ಇದರಿಂದ ಡ್ರೈವ್‌ ಮತ್ತು ನಿಮ್ಮ ಡಿವೈಸ್‌ ಎರಡನ್ನೂ ಶುಚಿಯಾಗಿಟ್ಟುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.