ADVERTISEMENT

ಸುದ್ದಿ ಸಂಗ್ರಹಕ್ಕೂ ಡ್ರೋನ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2015, 19:30 IST
Last Updated 27 ಜನವರಿ 2015, 19:30 IST

ಡ್ರೋನ್‌ ಕಳೆದ ಎರಡು ಮೂರು ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಪದ/ಹೆಸರು. ಇದೇ ಜನವರಿ ಆರಂಭದಲ್ಲಿ ಅಮೆರಿಕದ ಲಾಸ್‌ವೇಗಾಸ್‌ನಲ್ಲಿ ನಡೆದ ‘ಕನ್‌ಸ್ಯೂಮರ್  ಎಲೆಕ್ಟ್ರಾನಿಕ್ಸ್  ಷೋ’ದಲ್ಲಿಯೂ ಡ್ರೋನ್‌ಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು.

ಮಾನವ ರಹಿತ ವೈಮಾನಿಕ ವಾಹನ ಡ್ರೋನ್‌‌, ಸದ್ಯ ಅಮೆರಿಕದ ರಕ್ಷಣಾ ಬತ್ತಳಿಕೆಯಲ್ಲಿರುವ ಪ್ರಮುಖ ‘ಅಸ್ತ್ರ’!
ಇಂತಹ ಡ್ರೋನ್‌ (ಸ್ವರೂಪದಲ್ಲಿ ಭಿನ್ನವಾದ) ಸಾಧನವನ್ನು ವಾಣಿಜ್ಯ ಉದ್ದೇಶಗಳಿಗೂ ಉಪಯೋಗಿಸಬಹುದು!
ಪ್ರಸ್ತುತ ಜಾಗತಿಕ ಸುದ್ದಿಸಂಸ್ಥೆ ಸಿಎನ್‌ಎನ್‌, ಸುದ್ದಿ ಸಂಗ್ರಹಣೆಗಾಗಿ ಡ್ರೋನ್‌ಗಳ ಪರೀಕ್ಷಾರ್ಥ ಉಡಾವಣೆ ನಡೆಸಲು ಅಮೆರಿಕ ವಿಮಾನಯಾನ ಪ್ರಾಧಿಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಅಮೆರಿಕದಲ್ಲಿ ಸದ್ಯ ಕೇವಲ ಸೇನಾ ಕಾರ್ಯಾಚರಣೆಗೆ ಮಾತ್ರವೇ ಇವನ್ನು ಬಳಸಲಾಗುತ್ತಿದೆ. ಚಿತ್ರಗಳನ್ನು ಕ್ಲಿಕ್ಕಿಸಲು ಹಾಗೂ ಮಾಹಿತಿಯನ್ನು ಸಂಗ್ರಹಿಸುವ ಚಿಕ್ಕ ಪ್ರಮಾಣದ ಡ್ರೋನ್‌ಗಳ ವೈಯಕ್ತಿಕ ಬಳಕೆಯ ಮೇಲೆ ನಿಷೇಧವಿದೆ. ಆದರೆ ಕಡಿಮೆ ಎತ್ತರದಲ್ಲಿ ಹಾಗೂ ವಿಮಾನ ನಿಲ್ದಾಣಗಳಿಂದ ದೂರದ ಪ್ರದೇಶದಲ್ಲಿ ಇವುಗಳ ಹಾರಾಟಕ್ಕೆ ವಿನಾಯಿತಿ ಇದೆ.

(ಬೆಂಗಳೂರಿನಲ್ಲಿಯೂ 2015ನೇ ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದ  ಜನರ ಸಮೂಹದಲ್ಲಿ ಕಿಡಿಗೇಡಿ ಕೃತ್ಯದಲ್ಲಿ ತೊಡಗುವವರ ಮೇಲೆ ಕಣ್ಣಿಡಲೂ, ದುಷ್ಕರ್ಮಿಗಳು ಸಂಚು ನಡೆಸಿದ್ದರೆ ವಿಫಲಗೊಳಿಸಲೂ ಸಹ ಡ್ರೋನ್‌‌ ಬಳಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು).

‘ಹವ್ಯಾಸಕ್ಕೆ-ಬಳಸುವಂತಹ ದರ್ಜೆಯ ಉಪಕರಣಗಳನ್ನು ಮೀರಿ ಮುನ್ನಡೆಯುವುದು ಮತ್ತು ವಿವಿಧ ಬಗೆಯ ಮಾನವ ರಹಿತ ವೈಮಾನಿಕ ವಾಹನ ಹಾಗೂ  ಕ್ಯಾಮೆರಾ ವ್ಯವಸ್ಥೆಗಳನ್ನು ಬಳಸಿಕೊಂಡು ಲಭ್ಯವಿರುವ ಹಾಗೂ ಕಾರ್ಯಸಾಧ್ಯವಾದ ಆಯ್ಕೆಗಳೊಂದಿಗೆ ಉನ್ನತ ಗುಣಮಟ್ಟದ ವಿಡಿಯೊ ಪತ್ರಿಕೋದ್ಯಮವನ್ನು ಹುಟ್ಟುಹಾಕುವುದು ನಮ್ಮ ಗುರಿ’ ಎಂದಿದ್ದಾರೆ ಸಿಎನ್ಎನ್‌ನ ಹಿರಿಯ ಉಪಾಧ್ಯಕ್ಷ ಡೇವಿಡ್ ವಿಜಿಲ್ಯಾಂಟೆ.
ಈ ಸಂಬಂಧ ಜಾರ್ಜಿಯಾ ತಾಂತ್ರಿಕ ವಿಶ್ವವಿದ್ಯಾಲಯಲ್ಲಿ ಪ್ರಯೋಗಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.