ADVERTISEMENT

ವೈದ್ಯರ ಭೇಟಿಗೆ ಮುನ್ನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 19:30 IST
Last Updated 24 ಜೂನ್ 2016, 19:30 IST

ಗಂಗಮ್ಮ ಖಿನ್ನತೆಯ ಸಮಸ್ಯೆಗಾಗಿ ನನ್ನಲ್ಲಿ ಬಂದಿದ್ದಾಳೆ. ಪರೀಕ್ಷೆಯಾಯಿತು ಅವಳ ರಕ್ತದೊತ್ತಡ ಕೂಡ ಹೆಚ್ಚಾಗಿದೆ. ಈ ವಿಷಯವನ್ನು ಗಂಗಮ್ಮ ಮತ್ತು ಸಂಬಂಧಿಕರಿಗೆ ಹೇಳಿದರೆ, ನಿಧಾನವಾಗಿ ಈಗಾಗಲೇ ಹೆಚ್ಚಿನ ರಕ್ತದೊತ್ತಡಕ್ಕೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೆವೆಂದರು.

‘ಮಾತ್ರೆಯನ್ನು ತೋರಿಸಿ’ ಎಂದರೆ ‘ಅದನ್ನು ತಂದೇ ಇಲ್ಲ, ಹೆಸರೂ ಗೊತ್ತಿಲ್ಲ’ ಎನ್ನುತ್ತಾರೆ. ‘ಕೆಂಪು ಬಣ್ಣದ ಮಾತ್ರೆ’ ಎಂದಳು ಗಂಗಮ್ಮ. ನನಗೆ ನೂರಾರು ಮಾತ್ರೆಗಳ ಚಿತ್ರಣ ಮನದಲ್ಲಿ ಮೂಡುತ್ತಿದೆ.

ಸದ್ಯದ ಮಟ್ಟಿಗೆ ಹೊಸದಾದ ಬಿ.ಪಿ. ಮಾತ್ರೆ ನೀಡಲೋ ಅಥವಾ ಅವರ ಕುಟುಂಬ ವೈದ್ಯರಲ್ಲೇ ಕಳಿಸಲಾ?’ ವೈದ್ಯೆಯಾಗಿ ದಿನನಿತ್ಯ ನನಗೆ ಇಂತಹ ಹಲವಾರು ಸಂದರ್ಭಗಳು ಎದುರಾಗಿವೆ.

ವೈದ್ಯರ ಭೇಟಿಗೆ ಮುನ್ನ ರೋಗಿ ಸಂಬಂಧಿಕರು ಸ್ವಲ್ಪ ಮಟ್ಟಿಗೆ ತಯಾರಾಗಿ ಬಂದರೆ, ವೈದ್ಯರಿಗೆ ಚಿಕಿತ್ಸೆ ನೀಡುವಲ್ಲಿ ಸುಲಭವಾಗುತ್ತದೆ. ವೈದ್ಯರನ್ನು ಭೇಟಿ ಆಗುವ ಮುನ್ನ ಇವುಗಳನ್ನು ನೆನಪಿಡಿ.

*ನಿಮ್ಮ ಸಮಸ್ಯೆ/ಕಾಯಿಲೆಯ ಲಕ್ಷಣಗಳ ಕುರಿತು ಒಂದು ಕಾಗದದಲ್ಲಿ ಬರೆದುಕೊಂಡು ಹೋಗಿ.

*ಈವರೆಗಿನ ಹಳೆಯ ರೆಕಾರ್ಡ್‌ಗಳನ್ನು /ಪರೀಕ್ಷೆಯ ರಿಪೋರ್ಟ್‌ಗಳನ್ನು ತಪ್ಪದೇ ತೆಗೆದುಕೊಂಡು ಹೋಗಿ. ಸಾಧ್ಯವಾದರೆ ದಿನಾಂಕಕ್ಕೆ ಅನುಗುಣವಾಗಿ ಕ್ರಮವಾಗಿ ಜೋಡಿಸಿ.

*ಈಗಾಗಲೇ ಯಾವುದೇ ಕಾಯಿಲೆಗಳಿಂದ ನರಳುತ್ತಿದ್ದರೆ, ಬೇರೆಯ ವೈದ್ಯರಿಗೆ ತೋರಿಸುತ್ತಿದ್ದರೆ, ಅದನ್ನು ಮುಚ್ಚಿಡಬೇಡಿ.

*ಬೇರೆ ಸಮಸ್ಯೆಗಳಿಗೆ ತೆಗೆದು ಕೊಳ್ಳುತ್ತಿರುವ ಮಾತ್ರೆಗಳನ್ನು  ಮರೆಯದೇ ವೈದ್ಯರಿಗೆ ತೋರಿಸಿ.

ಮನೋರೋಗಗಳಂತಹ ದೀರ್ಘಕಾಲಿಕ ರೋಗಗಳಿಗಂತೂ, ರೋಗಿಯೊಂದಿಗೆ ಒಬ್ಬ ಕುಟುಂಬದ ಸದಸ್ಯರು ಇರಲೇಬೇಕು. ಮತ್ತು ಈಗಾಗಲೇ ಬೇರೆಯ ಮನೋವೈದ್ಯರಿಗೆ ತೋರಿಸಿದ್ದರೆ ಆ ಚಿಕಿತ್ಸೆಯ ಸಮಯದಲ್ಲಿ ರೋಗಿ ಹೇಗಿದ್ದನೆಂಬುದನ್ನು ಒಂದು ಕಾಗದದಲ್ಲಿ ಬರೆದುಕೊಂಡು ಹೋಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.