ADVERTISEMENT

PV Facebook Live | ನೆಮ್ಮದಿ ಎಂದರೆ ಸಾವು: ಪಂಡಿತ್ ರಾಜೀವ್ ತಾರಾನಾಥ್

ಪ್ರಜಾವಾಣಿ ವಿಶೇಷ
Published 3 ಜುಲೈ 2021, 17:23 IST
Last Updated 3 ಜುಲೈ 2021, 17:23 IST
ಪ್ರಜಾವಾಣಿ ಸಂವಾದದಲ್ಲಿ ಪಂಡಿತ್‌ ರಾಜೀವ್‌ ತಾರಾನಾಥ್‌
ಪ್ರಜಾವಾಣಿ ಸಂವಾದದಲ್ಲಿ ಪಂಡಿತ್‌ ರಾಜೀವ್‌ ತಾರಾನಾಥ್‌   

ಬೆಂಗಳೂರು: ‘ನೆಮ್ಮದಿ ಎಂದರೆ ಸಾವು. ನಿಮಗೆ ಬಾಳಿನಲ್ಲಿ ನೆಮ್ಮದಿ ಬಂತಾ? ಅಲ್ಲಿಂದ ಹದಿನೈದು ದಿವಸಕ್ಕೆ ಸತ್ತು ಹೋಗ್ತೀರಿ. ಮಾಡ್ಲಿಕ್ಕೆ ಕೆಲಸ ಇದ್ದರೆ ನೀವು ಸಾಯಲ್ಲ. ನೆಮ್ಮದಿ ಇರಬಾರದು ಕಣ್ರೀ. ಯಾವುದೋ ಒಂದು ಕೆಲಸ ನಾಳೆಗೆ ಬಾಕಿ ಇರಬೇಕು…’- ಇದು ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ಮಾಂತ್ರಿಕ ಪಂಡಿತ ರಾಜೀವ ತಾರಾನಾಥ್ ಅವರ ಸ್ಪಷ್ಟನುಡಿ.

‘ಪ್ರಜಾವಾಣಿ ಸೆಲೆಬ್ರಿಟಿ ಲೈವ್’ ಫೇಸ್‌ಬುಕ್ ಸಂವಾದದಲ್ಲಿ ಶನಿವಾರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರು ತಮ್ಮ ಬಾಲ್ಯ, ಯೌವನ, ಅಲೆಮಾರಿ ಬದುಕು, ಸಂಗೀತದ ಧ್ಯಾನ ಮತ್ತು ತಂದೆ ಪಂಡಿತ ತಾರಾನಾಥ ಹಾಗೂ ಗುರು ಉಸ್ತಾದ್ ಅಲಿ ಅಕ್ಬರ್ ಖಾನ್ ಕುರಿತು ಮಾತನಾಡಿದರು. ತಮ್ಮ ಸೂಫಿ ಬದುಕಿನ ಬವಣೆ, ಸಂಭ್ರಮ, ಸಾರ್ಥಕ ಕ್ಷಣಗಳನ್ನು ಅನಾವರಣಗೊಳಿಸಿದರು.

ಅಕ್ಟೋಬರ್‌ನಲ್ಲಿ 90 ವರ್ಷಕ್ಕೆ ಕಾಲಿಡಲಿರುವ ಪಂಡಿತ ರಾಜೀವ್ ತಾರಾನಾಥ್, ಉತ್ಸಾಹದಿಂದ ದೃಢ ಮಾತುಗಳಲ್ಲಿ ತಾವು ನಡೆದುಬಂದ ದಾರಿಯತ್ತ ಹಿನ್ನೋಟ ಬೀರಿದರು.

ADVERTISEMENT

ಬಹುತ್ವ ಸಂಸ್ಕೃತಿಯ ತವರಾಗಿದ್ದ ಭರತವರ್ಷದಲ್ಲಿ, ಹಿಂದೂಸ್ತಾನಿ ಸಂಗೀತ ಹುಟ್ಟಿದ ನೆಲದಲ್ಲಿ ಇವತ್ತು ಹೊಡಿ ಬಡಿ ಸಂಸ್ಕೃತಿ ಬೆಳೆಯುತ್ತಿರುವುದರ ಕುರಿತು, ಎಲ್ಲವೂ ರಾಜಕೀಯಗೊಳ್ಳುತ್ತಿರುವ ಕುರಿತು ಅವರು ವಿಷಾದದ ಧ್ವನಿಯಲ್ಲಿ ಮರುಗಿದರು.

ಪಂಡಿತ್ ರಾಜೀವ್ ತಾರಾನಾಥ್ ಜತೆಗಿನ ಪ್ರಜಾವಾಣಿ ಸೆಲೆಬ್ರಿಟಿ ಕಾರ್ಯಕ್ರಮದ ಪೂರ್ಣ ವಿಡಿಯೊ ವೀಕ್ಷಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.