ADVERTISEMENT

ವಸುಂಧರಾ ಕದಲೂರು ಬರೆದ ಕವಿತೆ: ಒಳಪ್ರಜ್ಞೆಯ ಪ್ರಶ್ನೆಗಳು…

ವಸುಂಧರಾ ಕದಲೂರು
Published 9 ಅಕ್ಟೋಬರ್ 2021, 19:30 IST
Last Updated 9 ಅಕ್ಟೋಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆ ನಾಲ್ಕು ಕಾಲಿನ ನಿರಾಸಕ್ತಿಗಳು

ಅಷ್ಟೇನೂ ಮುಖ್ಯವಲ್ಲದ
ಅಡ್ಡರಸ್ತೆಗಳ ನಡುವಲ್ಲಿ
ದಾರಿಗಡ್ಡ ಮಲಗಿರುತ್ತವೆ..

ಜಗದ ತುರ್ತುಗಳನು ತಲೆ ಮೇಲೆ
ಹೊತ್ತಂತೆ ಬರುವ ಗಾಡಿಗಳಿಗೆ
ಸರಕ್ಕನೆ ಬ್ರೇಕು ಹಾಕಿಸಿ ವಾಸ್ತವ
ದರ್ಶನ ಮಾಡಿಸುವ ನಡುರಸ್ತೆ
ನಿಲುಗಡೆಗಳಿವು..

ADVERTISEMENT

ಈ ಬೀದಿಕೂಸುಗಳು, ಎಲ್ಲರ
ಅನುಕಂಪ ಯಾಚಕರು; ಸುಗ್ರಾಸ
ಬೇಡದೆ, ಸಿಕ್ಕಿದನು ತಿಂದು ಸ್ವಸ್ಥ
ಮಲಗುವ ಚಿರಂಜೀವಿಗಳು..

ಸಂತಾನ ಹರಣಕೆ ಮೈಯೊಡ್ಡುತಾ,
ಸುಖಕೆ ಮರೀಚಿಕೆಗಳಾಗುತಾ ಆಗೀಗ
ವ್ಯಗ್ರರಾಗಿಯೂ, ಬೀದಿ ರಕ್ಷಕರಾಗಿಯೂ
ನಮ್ಮೊಳ ಪ್ರಜ್ಞೆಯ ಪ್ರಶ್ನೆಗಳಾಗುವವು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.