ADVERTISEMENT

Budget 2021: ಭರ್ಜರಿ ಏರಿಕೆಯಾಗಲಿದೆ ಪೆಟ್ರೋಲ್, ಡೀಸೆಲ್ ಬೆಲೆ

ಏಜೆನ್ಸೀಸ್
Published 1 ಫೆಬ್ರುವರಿ 2021, 8:56 IST
Last Updated 1 ಫೆಬ್ರುವರಿ 2021, 8:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೃಷಿ ಸೆಸ್ ವಿಧಿಸಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಇದರೊಂದಿಗೆ ಪೆಟ್ರೋಲ್, ಡೀಸೆಲ್ ಬೆಲೆ ಭರ್ಜರಿಯಾಗಿ ಏರಿಕೆಯಾಗಲಿದೆ.

ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹2.30 ಹಾಗೂ ಡೀಸೆಲ್ ದರ ₹4ರಷ್ಟು ಏರಿಕೆಯಾಗಲಿದೆ.

ಪೆಟ್ರೋಲ್, ಡೀಸೆಲ್ ಮಾತ್ರವಲ್ಲದೆ ಕಾಬೂಲ್‌ ಕಡಲೆ, ಸೇಬು, ಮದ್ಯ, ಚಿನ್ನ–ಬೆಳ್ಳಿ, ವಾಹನ ಬಿಡಿಭಾಗ, ಹುರಿಗಡಲೆ, ಹತ್ತಿ, ಸೂರ್ಯಕಾಂತಿ ಸಹ ದುಬಾರಿಯಾಗಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.