
ಬಳ್ಳಾರಿ: ಬಳ್ಳಾರಿ ತಾಲೂಕಿನ ಯಾಳ್ಪಿ ಕಗ್ಗಲ್ ಬಳಿ ಹೂವುಗಳನ್ನು ಹರಿಯಲು ಹೋಗಿ ಹಗರಿ ನದಿಯಲ್ಲಿ ಪ್ರವಾಹದಲ್ಲಿ ಹಿನ್ನೆಲೆ ಸಿಕ್ಕಿಹಾಕಿಕೊಂಡಿದ್ದ 24 ಜನರನ್ನು ಬಳ್ಳಾರಿ ಜಿಲ್ಲಾಡಳಿತ ಮತ್ತು ಅಗ್ನಿಶಾಮಕ ದಳದ ತಂಡಗಳು ವಿಶೇಷ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಣೆ ಮಾಡಿವೆ.
ಯಾಳ್ಪಿ ಕಗ್ಗಲ್‍ನ 24 ಜನರು ನಿತ್ಯದಂತೆ ಯಥಾರೀತಿ ಹೂವುಗಳನ್ನು ಹರಿಯಲು ತೆರಳಿದ್ದರು;ಹಗರಿ ನದಿಯಲ್ಲಿ ಪ್ರವಾಹ ಹೆಚ್ಚಳವಾದ ಹಿನ್ನೆಲೆ ಆ ಕಡೆ ಸಿಕ್ಕಿಹಾಕಿಕೊಂಡಿದ್ದರು.
ಮಾಹಿತಿ ಅರಿಯುತ್ತಲೇ ಅಗ್ನಿಶಾಮಕ ದಳದ ವಿಶೇಷ ತಂಡದ ಜೊತೆಗೆ ಸ್ಥಳಕ್ಕೆ ಧಾವಿಸಿದ ಸಹಾಯಕ ಆಯುಕ್ತ ಡಾ.ಆಕಾಶ ಮತ್ತು ಬಳ್ಳಾರಿ ತಹಸೀಲ್ದಾರ್ ವಿಶ್ವನಾಥ 24 ಜನರನ್ನು ಸುರಕ್ಷಿತವಾಗಿ ಮರಳಿ ರಕ್ಷಿಸಿದ್ದಾರೆ.
ಅದೇ ರೀತಿಯಲ್ಲಿ ಮೋಕಾ, ಗೋಡೆಹಾಳ್, ಸಂಗನಕಲ್ಲು, ಪರಮದೇವನಹಳ್ಳಿ ಸೇರಿದಂತೆ ವಿವಿಧೆಡೆ ಮಳೆಯಿಂದ ಹಾನಿಗೊಳಗಾದ ಮತ್ತು ಮಳೆನೀರು ನುಗ್ಗಿ ಸಮಸ್ಯೆಯಾದ ಸ್ಥಳಗಳಿಗೆ ಸಹಾಯಕ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ವಿತರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.