ADVERTISEMENT

ಎಚ್ಚರ ತಪ್ಪಿದರೆ ಮತ್ತೆ ಲಾಕ್‌ಡೌನ್‌: ಸಚಿವ ಆರ್‌.ಅಶೋಕ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 21:29 IST
Last Updated 4 ಜುಲೈ 2021, 21:29 IST
ಸಚಿವ ಆರ್‌.ಅಶೋಕ ಅವರು ಆಟೊ ಚಾಲಕರಿಗೆ ಕಿಟ್‌ ವಿತರಿಸಿದರು. ಸಂಸದ ತೇಜಸ್ವಿ ಸೂರ್ಯ ಮತ್ತು ಎಲ್‌.ಶ್ರೀನಿವಾಸ್‌ ಇದ್ದಾರೆ.
ಸಚಿವ ಆರ್‌.ಅಶೋಕ ಅವರು ಆಟೊ ಚಾಲಕರಿಗೆ ಕಿಟ್‌ ವಿತರಿಸಿದರು. ಸಂಸದ ತೇಜಸ್ವಿ ಸೂರ್ಯ ಮತ್ತು ಎಲ್‌.ಶ್ರೀನಿವಾಸ್‌ ಇದ್ದಾರೆ.   

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಕಡಿಮೆಯಾಗುತ್ತಿವೆ. ಹಾಗೆಂದು ಯಾರೂ ಮೈಮರೆಯಬಾರದು. ಮುಖಗವಸು ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ಮನೆಯಿಂದ ಹೊರ ಹೋದಾಗ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಕೋವಿಡ್‌ ಲಸಿಕೆಯನ್ನೂ ತಪ್ಪದೆ ಪಡೆಯಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಗೊಳಿಸುವುದು ಅನಿವಾರ್ಯ’ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಪಾಲಿಕೆಯ ಮಾಜಿ ಸದಸ್ಯ ಎಲ್‌.ಶ್ರೀನಿವಾಸ್‌ ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ 1,000 ಆಟೊ ಚಾಲಕರು ಹಾಗೂ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್‌ ಉಚಿತವಾಗಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಲ್‌.ಶ್ರೀನಿವಾಸ್‌, ‘ನನ್ನ ವಾರ್ಡ್‌ನಲ್ಲಿ ಈವರೆಗೆ 5 ಸಾವಿರಕ್ಕೂ ಹೆಚ್ಚು ಜನರಿಗೆ ದಿನಸಿ ಕಿಟ್‌ ವಿತರಿಸಲಾಗಿದೆ. ‌ಪ್ರತಿದಿನ 8 ಸಾವಿರ ಮನೆಗಳಿಗೆ ಆಹಾರದ ಪೊಟ್ಟಣಗಳನ್ನೂ ತಲುಪಿಸಿದ್ದೇವೆ. ಈ ಕಾರ್ಯ ಹೀಗೆ ಮುಂದುವರಿಯಲಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.