ADVERTISEMENT

ಗೋಣಿಕೊಪ್ಪಲು: ನಾಗರಹಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 6:08 IST
Last Updated 29 ಜೂನ್ 2021, 6:08 IST
ಗೋಣಿಕೊಪ್ಪಲಿನ ದಿಲೀಪ್ ಅವರ ಮನೆಯಲ್ಲಿದ್ದ ನಾಗರಹಾವನ್ನು ಸ್ನೇಕ್ ಭಾವೆ ಅವರು ಹಿಡಿದರು
ಗೋಣಿಕೊಪ್ಪಲಿನ ದಿಲೀಪ್ ಅವರ ಮನೆಯಲ್ಲಿದ್ದ ನಾಗರಹಾವನ್ನು ಸ್ನೇಕ್ ಭಾವೆ ಅವರು ಹಿಡಿದರು   

ಗೋಣಿಕೊಪ್ಪಲು: ಇಲ್ಲಿನ ಉಮಾ ಮಹೇಶ್ವರಿ ಬಡಾವಣೆಯ ದಿಲೀಪ್ ಎಂಬುವವರ ಮನೆಯಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು ಸ್ನೇಕ್ ಭಾವೆ ಅವರು ಹಿಡಿದು ಕಾಡಿಗೆ ಬಿಟ್ಟರು.

ಸೋಮವಾರ ಮಧ್ಯಾಹ್ನ ತೋಟದ ಕಡೆಯಿಂದ ಬಂದ ಹಾವು ಮನೆಯ ಗೋಡೆ ಬದಿಯ ಮೂಲೆ ಸೇರಿತ್ತು. ದಿಲೀಪ್ ಅವರು ಸ್ನೇಕ್ ಭಾವೆ ಅವರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಭಾವೆ ಅವರು, ಸುಮಾರು 5 ಅಡಿ ಉದ್ದದ ನಾಗರಹಾವನ್ನು ಹಿಡಿದು ತಿತಿಮತಿ ಅರಣ್ಯಕ್ಕೆ ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT